ಮಂಡ್ಯ:ಕೆಆರ್‌ಪೇಟೆ ಕ್ಷೇತ್ರದ ರೆಬೆಲ್ ಶಾಸಕ ಕೆ ಸಿ ನಾರಾಯಣಗೌಡರ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಸಕ್ಸಸ್ ಸೂತ್ರವನ್ನು ಹೊರ ಹಾಕಿದರು.
'ನಾನು ನಿತ್ಯ ಹೆಂಡ್ತಿ ಕೇಳಿಯೇ ಮನೆಯಿಂದ ಹೊರಬರ್ತೇನೆ..' ನಾರಾಯಣಗೌಡರು ಹೀಗೆ ಮಾಡಲು ಕಾರಣವೂ ಇದೆ.. - Rebel MLA reveal his Success Secret
ಕೆಆರ್‌ಪೇಟೆ ಕ್ಷೇತ್ರದ ರೆಬೆಲ್ ಶಾಸಕ ಕೆ ಸಿ ನಾರಾಯಣಗೌಡರ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಸಕ್ಸಸ್ ಸೂತ್ರವನ್ನು ಹೊರ ಹಾಕಿದರು.
ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಧರ್ಮಸ್ಥಳ ಸ್ವಾವಲಂಬಿ ಅಭಿವೃದ್ಧಿ ಸಂಸ್ಥೆ ಆಯೋಜನೆ ಮಾಡಿದ್ದ ಮದ್ಯವರ್ಜನೆ ಶಿಬಿರದಲ್ಲಿ ಮಾತನಾಡಿದ ಅವರು, ಮದ್ಯವರ್ಜನೆ ಮಾಡಿದ 100ಕ್ಕೂ ಹೆಚ್ಚು ಮಂದಿಗೆ ಬುದ್ದಿಮಾತು ಹೇಳುವ ಸಂದರ್ಭದಲ್ಲಿ ತಮ್ಮ ಸೂತ್ರ ಹೊರ ಹಾಕಿದರು. ಯಾರೂ ಕೂಡ ನಿಮ್ಮ ಧರ್ಮಪತ್ನಿಯರ ಕಣ್ಣಲ್ಲಿ ಕಣ್ಣೀರು ಹಾಕಿಸಬೇಡಿ. ಹಾಕಿಸಿದ್ರೆ, ಶ್ರೇಯಸ್ಸು ಸಿಗುವುದಿಲ್ಲ. ನಾನೂ ಕೂಡ ಬೆಳಗ್ಗೆ ಎದ್ದು,ಪತ್ನಿಯ ಅಪ್ಪಣೆ ಪಡೆದು ಹೊರ ಬರುತ್ತೇನೆ. ನಾನೊಬ್ಬನೇ ಅಲ್ಲ, ಎಷ್ಟೋ ಮಂದಿ ಸಂಸದರು, ಶಾಸಕರು ಸೇರಿದಂತೆ ಸಾಧನೆ ಮಾಡಿದವರೆಲ್ಲಾ ಹೀಗೆನೇ.. ನೀವು ಕೂಡ ಮದ್ಯ ಸೇವನೆ ಬಿಟ್ಟು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇನ್ನು, ಸಿಎಂ ಯಡಿಯೂರಪ್ಪ ತವರು ಗ್ರಾಮ ಬೂಕನಕೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆಆರ್‌ಪೇಟೆ ಕೃಷ್ಣ ಹಾಗೂ ರೆಬೆಲ್ ಶಾಸಕ ನಾರಾಯಣಗೌಡ ಒಂದೇ ವೇದಿಕೆ ಹಂಚಿಕೊಂಡಿದ್ದರು.