ಮಂಡ್ಯ:ರೈತಾಪಿ ವರ್ಗದ ಯುವಕರು ಮದುವೆಯಾಗಲು ಹೆಣ್ಣು ಕೇಳಲು ಹೋದರೆ ಹೆಣ್ಣೆತ್ತವರು ಹುಡುಗ ಏನು ಮಾಡ್ಕೊಂಡು ಇದ್ದಾನೆ ಅಂದಾಗ ರೈತನಾಗಿದ್ದಾನೆ ಅಂದರೆ ಸಾಕು ಮೂಗು ಮುರಿಯುತ್ತಾರೆ. ಹೀಗಾಗಿ ಯುವಕರು ಮದುವೆಯಾಗಲು ಕನ್ಯೆ ಸಿಗದೇ ಇದೀಗ ವಧು-ವರರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳ ಸಂಗಾತಿಗಾಗಿ ಕ್ಯೂ ನಿಂತಿದ್ದಾರೆ.
ರೈತ ದೇಶದ ಬೆನ್ನೆಲುಬು, ರೈತನಿದ್ದರೆ ಮಾತ್ರ ದೇಶ ಸುಭೀಕ್ಷವಾಗಿ ಇರುತ್ತೆ ಅಂತಾ ಹೇಳುತ್ತಾರೆ. ಆದರೆ ಇದೀಗ ಅಂತಹ ರೈತ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಮದುವೆಯಾಗಲು ರೈತ ಹೆಣ್ಣು ಕೇಳಲು ಹೋದರೆ, ಹೆಣ್ಣೆತ್ತವರು ನಾವು ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲ. ನಾವು ಪಟ್ಟಣದಲ್ಲಿ ಕೆಲಸದಲ್ಲಿ ಇರುವವರಿಗೆ ನಮ್ಮ ಮಗಳನ್ನು ಕೊಡುತ್ತೇವೆ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ರೈತ ಯುವಕರು ದಾಂಪತ್ಯ ಜೀವನ ತುಳಿಯಲು ಹುಡುಗಿ ಸಿಗದೇ ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರದಾಡುತ್ತಿದ್ದಾರೆ.