ಕರ್ನಾಟಕ

karnataka

ETV Bharat / state

ಮತ ಬೇಟೆ ಆರಂಭಿಸಿದ ನಟಿ ಸುಮಲತಾ: ಆರತಿ ಮಾಡಿ ಸ್ವಾಗತಿಸಿದ ಅಭಿಮಾನಿಗಳು - Actress Sumalatha

ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ನಟಿ ಸುಮಲತಾ ಜಿಲ್ಲೆಯಲ್ಲಿ ಮತ ಬೇಟೆ ಆರಂಭ ಮಾಡಿದ್ದಾರೆ‌. ಜಿಲ್ಲೆಯ ಜನತೆ ಸೇರಿದಂತೆ ಸ್ಯಾಂಡಲ್​ವುಡ್​ನ ತಾರಾ ಬಳಗವೂ ಇವರ ಹಿಂದಿದೆ ಎನ್ನಲಾಗುತ್ತಿದೆ.

ನಟಿ ಸುಮಲತಾ ಅಂಬರೀಶ್

By

Published : Mar 11, 2019, 5:58 PM IST

Updated : Mar 11, 2019, 7:34 PM IST

ಮಂಡ್ಯ: ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದೆ‌. ನಟಿ ಸುಮಲತಾ ಅಧಿಕೃತವಾಗಿ ಸ್ಪರ್ಧೆ ಘೋಷಣೆ ಮಾಡದೇ ಇದ್ದರೂ ಜಿಲ್ಲೆಯಲ್ಲಿ ಮತ ಬೇಟೆ ಆರಂಭ ಮಾಡಿದ್ದಾರೆ‌. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು, ಮಹಿಳೆಯರು ಆರತಿ ಮಾಡಿ ಸ್ವಾಗತ ಮಾಡುತ್ತಿದ್ದಾರೆ‌.

ಮತ ಭೇಟೆ ಆರಂಭ ಮಾಡಿದ ನಟಿ ಸುಮಲತಾ

ಊಹಾಪೋಹಕ್ಕೆ ಬೆಲೆ ಕೊಡಬೇಡಿ:

ನನ್ನ ವಿರುದ್ಧ ಬರುವ ಊಹಾಪೋಹಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಹೀಗಾಗಿ ಅಧಿಕೃತ ಫೇಸ್​​ಬುಕ್‌ ಖಾತೆ ತೆರೆದಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ ಅಂತ ಹೇಳಿದರು.

ಮದರ್ ಇಂಡಿಯಾ ಅಂತಾರೆ ದರ್ಶನ್:

ನನ್ನನ್ನು ದರ್ಶನ್ ಮದರ್ ಇಂಡಿಯಾ ಅಂತ ಕರೆಯುತ್ತಾರೆ. ಚುನಾವಣೆ ಬಗ್ಗೆ ಅವರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಶೀಘ್ರವೇ ಪ್ರಚಾರಕ್ಕೆ ಬರಲಿದ್ದಾರೆ. ಇವರಲ್ಲದೆ ಸ್ಯಾಂಡಲ್‌ವುಡ್​ನ ಇತರೆ ಕಲಾವಿದರು ಸಹ ಬೆಂಬಲ ನೀಡುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ನೋಟು, ಸುಮಲತಾಗೆ ವೋಟು:

ಇನ್ನು ಸುಮಲತಾ ಅಭಿಮಾನಿಗಳು ವಿಶಿಷ್ಟವಾಗಿ ಪ್ರಚಾರ ಆರಂಭ ಮಾಡಿದ್ದಾರೆ. ಕುಮಾರಸ್ವಾಮಿ ನೋಟು, ಸುಮಲತಾಗೆ ವೋಟು ಅಂತ ಹೇಳಿಕೊಂಡು ಪ್ರಚಾರ ಆರಂಭ ಮಾಡಿದ್ದಾರೆ. ಪ್ರತಿ ಹಳ್ಳಿಗೂ ಹೋಗುತ್ತಿರುವ ಅಭಿಮಾನಿಗಳು ಹೀಗೆ ವಿಶಿಷ್ವವಾಗಿ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಸ್ಥಳೀಯರು ಬೇಕು ದೂರದ ಹಾಸನದವರು ಬೇಡ ಎಂದು ಒತ್ತಾಯ ಮಾಡಿದ್ದಾರೆ.

Last Updated : Mar 11, 2019, 7:34 PM IST

ABOUT THE AUTHOR

...view details