ಕರ್ನಾಟಕ

karnataka

'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದರಿಂದಲೇ ದರ್ಶನ್​ ಹೀಗಾಡ್ತಿದ್ದಾರೆ: ಮಂಡ್ಯ ಜನರ ಅಭಿಮತ

By

Published : Jul 21, 2021, 6:32 PM IST

Updated : Jul 21, 2021, 6:52 PM IST

ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್​ ದುರ್ಯೋಧನನ ಪಾತ್ರ ಮಾಡಿದ್ದರಿಂದಲೇ ಅವರಲ್ಲಿ ಅಹಂ ಭಾವನೆ ಹೆಚ್ಚಾಗಿದೆ ಎಂದು ಮಂಡ್ಯ ಜಿಲ್ಲೆಯ ಉಪ್ಪರಕನಹಳ್ಳಿ ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

darshan
ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರ

ಮಂಡ್ಯ:ಮಹಾಭರತದ ದುರ್ಯೋಧನ ತನ್ನ ರೋಷಾವೇಷ, ಗರ್ವದಿಂದಲೇ ಹೆಸರಾದವನು. ಅದು ಐತಿಹ್ಯವಾದರೆ, ಬಹುಕೋಟಿ ವೆಚ್ಚದ 'ಕುರುಕ್ಷೇತ್ರ' ಸಿನಿಮಾ ದುರ್ಯೋಧನನ ಪಾತ್ರದಿಂದಲೇ ಸದ್ದು ಮಾಡಿತ್ತು. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ದರ್ಶನ್‌ಗೆ ಆ ಪಾತ್ರದಿಂದಲೇ ಅಹಂ ಹೆಚ್ಚಾಗಿದೆ ಅನ್ನೋದು ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮಸ್ಥರ ಅಭಿಪ್ರಾಯ.

ನಟ ದರ್ಶನ್​ ಕುರಿತು ಗ್ರಾಮಸ್ಥರ ಅಭಿಪ್ರಾಯ

ದುರ್ಯೋಧನನ ಪಾತ್ರ ಮಾಡಿದವರಿಗೆ 'ನಾನೇ ಎಂಬ ಭಾವನೆ' ಜಾಸ್ತಿಯಾಗುತ್ತೆ. ಆ ಪಾತ್ರ ಮಾಡಿದವರ್ಯಾರು ಯಾರ ಮಾತು ಕೇಳೋದಿಲ್ಲ. ಅವರು ಹೇಳಿದ್ದೇ ನಡೆಯಬೇಕು, ಅವರು ಹೇಳಿದ್ದೇ ಸರಿ ಅನ್ನುವ ರೀತಿ ವರ್ತಿಸುತ್ತಾರೆ ಅಂತಾರೆ ಈ ಗ್ರಾಮದಲ್ಲಿ ದುರ್ಯೋಧನನ ಪಾತ್ರ ಮಾಡಿದವರು.

ಉಪ್ಪರಕನಹಳ್ಳಿ ಗ್ರಾಮದ ಮೂರು ಜನರು ದುರ್ಯೋಧನನ ಪಾತ್ರ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರಂತೆ. ಬಳಿಕ ಬೇರೆ ಪಾತ್ರ ಮಾಡಿದ ಮೇಲೆ ಸಂಕಷ್ಟ ನಿವಾರಣೆ ಆಯ್ತು ಅಂತಿದ್ದಾರೆ. ಹೀಗಾಗಿ ನಟ ದರ್ಶನ್​ಗೆ ಬೇರೆ ಪಾತ್ರವೊಂದನ್ನ ಮಾಡುವಂತೆ ಗ್ರಾಮಸ್ಥರು ಸಲಹೆ ನೀಡಿದ್ದಾರೆ.

ದುರ್ಯೋಧನನ ಪಾತ್ರ ಮಾಡಿದ್ದವರು

ಕಳೆದ ಹಲವು ವರ್ಷಗಳ ಹಿಂದೆ ಗ್ರಾಮದ ಚೌಡೇಗೌಡ, ಮಹಾದೇವಪ್ಪ ಹಾಗೂ ನಾಗರಾಜು ಎಂಬುವರು ನಾಟಕದಲ್ಲಿ ದುರ್ಯೊಧನನ ಪಾತ್ರ ಮಾಡಿದ್ದು, ನಾಟಕದ ನಂತರ ಹಾಗೆ ಮೆರೆಯುತ್ತಿದ್ದರಂತೆ. ಯಾರಿಗೂ ಕೇರ್ ಮಾಡ್ತಿರಲಿಲ್ಲ. ನಂತರ ಜೀವನದಲ್ಲಿ ಸಾಕಷ್ಟು ತೊಂದರೆಗಳಾದಾಗ ದುರ್ಯೋಧನನ ಪಾತ್ರದ ನಂತರ ಬೇರೆ ಬೇರೆ ಪಾತ್ರಗಳನ್ನ ಮಾಡಿದ ಮೇಲೆ ನಮ್ಮ ಮನಸ್ಥಿತಿ ಸಹಜ ಸ್ಥಿತಿಗೆ ಬಂತು. ಬದುಕು ಸಹ ಸುಧಾರಿಸಿತು ಎನ್ನುತ್ತಿದ್ದಾರೆ ಈ ಗ್ರಾಮಸ್ಥರು.

ಈಗ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೂ ಅದೇ ಆಗಿದ್ದು, ಅವರೂ ಕುರುಕ್ಷೇತ್ರ ಸಿನಿಮಾ‌ದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದಾರೆ. ಪಾತ್ರದ ಛಾಯೆ ಅವರ ಮೇಲಿರೋದ್ರಿಂದ ಹೀಗೆ ಅಹಂ ಪಡ್ತಿದ್ದಾರೆ. ಹೀಗಾಗಿ ಮತ್ತೊಂದು ಪಾತ್ರ ಮಾಡಿ ನಡವಳಿಕೆ ಸುಧಾರಿಸಿಕೊಳ್ಳಲಿ ಎಂದು ಗ್ರಾಮಸ್ಥರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ದರ್ಶನ್​ ಅವರು ಮೈಸೂರಿನ ಸಂದೇಶ್​ ಹೋಟೆಲ್​ನಲ್ಲಿ ವೇಟರ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತ್ರ ಶ್ರೀರಂಗಪಟ್ಟಣದಲ್ಲಿ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ಮಾಡಿದ್ದರು ಅಂತಾ ಆತ ಕೆಲಸವನ್ನೇ ಬಿಟ್ಟಿದ್ದಾನೆ ಎಂಬ ದೂರು ಸಹ ಸದ್ದು ಮಾಡಿತ್ತು. ಹೀಗೆ ದರ್ಶನ್​ ವಿರುದ್ಧ ಇಂತಹ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಉಪ್ಪರಕನಹಳ್ಳಿ ಗ್ರಾಮಸ್ಥರು ತಮ್ಮದೇ ಆದ ಅನುಭವದ ಮಾತುಗಳನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.

Last Updated : Jul 21, 2021, 6:52 PM IST

ABOUT THE AUTHOR

...view details