ಮಂಡ್ಯ: ಅಮ್ಮ ಎಂಪಿ ಆಗಿದ್ದಾರೆ. ಅವರ ಕೆಲಸದಲ್ಲಿ ನಾನು ಪ್ರವೇಶ ಮಾಡುವುದಿಲ್ಲ. ನಾನು ರಾಜಕೀಯಕ್ಕೆ ಬರುವುದಿಲ್ಲವೆಂದು ಎಂದು ನಟ ಅಭಿಷೇಕ್ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ನೀವು ರಾಜಕೀಯಕ್ಕೆ ಬರುತ್ತೀರಾ ಅಂತ ಕೇಳಿದ್ರೆ ಅಭಿಷೇಕ್ ಅಂಬರೀಶ್ ಹೇಳಿದ್ದೇನು? - ನಟ ಅಭಿಷೇಕ್ ಅಂಬರೀಶ್
ಮಂಡ್ಯ ಸಮೀಪದ ಯಲಿಯೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹನುಮ ಜಯಂತಿ ಹಾಗೂ ಅಂಬಿ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಅಭಿಷೇಕ್ ಅಂಬರೀಶ್ ಪಾಲ್ಗೊಂಡಿದ್ದರು. ಈ ವೇಳೆ ತಾನು ರಾಜಕೀಯಕ್ಕೆ ಬರೋಲ್ಲ. ಈಗಾಗಲೇ ಅಮ್ಮ ಸುಮಲತಾ ಅಂಬರೀಶ್ ಕ್ಷೇತ್ರದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡ್ತಿದ್ದಾರೆ ಎಂದರು.
ಮಂಡ್ಯ ಸಮೀಪದ ಯಲಿಯೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹನುಮ ಜಯಂತಿ ಹಾಗೂ ಅಂಬಿ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಪ್ಪನ ಪ್ರೀತಿ ಇನ್ನೂ ಇದೆ. ಹಾಗಾಗಿ ಅಭಿಮಾನಿಗಳು ಕರೆಯುತ್ತಿರುತ್ತಾರೆ. ನಾನೂ ಬರುತ್ತಿರುತ್ತೇನೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅದಕ್ಕೆ ಅಮ್ಮ ಇದ್ದಾರೆ. ಅವರು ಕೆಲಸ ಮಾಡುತ್ತಾರೆ, ಮಾಡುತ್ತಿದ್ದಾರೆ ಎಂದರು.
ಅಭಿಷೇಕ್ ರಾಜಕೀಯಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ ಇಲ್ಲ. ಅಮ್ಮ ಇದರಲ್ಲ ಸಾಕು. ಇನ್ನೂ ಉತ್ತಮ ಕೆಲಸವನ್ನು ಅಮ್ಮ ಮಾಡುತ್ತಾರೆ ಎಂದು ಹೇಳಿದ್ರು.