ಮಂಡ್ಯ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ನಡೆದ ಎರಡೇ ದಿನದಲ್ಲಿ ಮಂಡ್ಯ ಪಶ್ಚಿಮ ಠಾಣೆ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿ ಇನ್ನು ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿರುವ ಪೊಲೀಸರು ಅವನ ಮೊಬೈಲ್ ಟ್ರ್ಯಾಕ್ ಮಾಡುತ್ತಿದ್ದಾರೆ. ಡಿ.18 ರ ತಡರಾತ್ರಿ ಮಂಡ್ಯದ ಕಲ್ಲಹಳ್ಳಿಯ ರೈಲ್ವೆ ಗೇಟ್ ಬಳಿ ಯಲಿಯೂರು ಗ್ರಾಮದ ರಕ್ಷಿತ್ (21) ಎಂಬಾತನನ್ನು ಆತನ ಐವರು ಸ್ನೇಹಿತರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಕಾರ್ತಿಕ್ ಚಿಕ್ಕಪ್ಪನ ಮೇಲೆ ರಕ್ಷಿತ್ ಹಲ್ಲೆ ಮಾಡಿದ್ದ ಎಂಬ ಕಾರಣಕ್ಕೆ ಕೃತ್ಯ ಎಸಗಲಾಗಿತ್ತು.