ಕರ್ನಾಟಕ

karnataka

ETV Bharat / state

ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಎರಗಿದ ಜವರಾಯ : ಹಾಲಿನ ಕ್ಯಾಂಟರ್ ಉರುಳಿ ಬಿದ್ದು ಮಹಿಳೆ ಸಾವು - ಮಂಡ್ಯ ಹಾಲಿನ ಕ್ಯಾಂಟರ್​ ಅಪಘಾತ ಸುದ್ದಿ

ಗೆಜ್ಜಲಗೆರೆ ಮನ್ಮುಲ್ ಘಟಕದ ಹಾಲಿನ ಉತ್ಪನ್ನಗಳನ್ನು ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಬಸ್ಸಿಗಾಗಿ ಕಾಯುತ್ತಿದ್ದ ಒರ್ವ ಮಹಿಳೆ ಮತ್ತು ವ್ಯಕ್ತಿಯ ಮೇಲೆ ಟ್ಯಾಂಕರ್​ ಉರುಳಿ ಬಿದ್ದಿದ್ದು ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.

ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಎರಗಿದ ಜವರಾಯ

By

Published : Oct 23, 2019, 6:36 AM IST

ಮಂಡ್ಯ:ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಹಾಲಿನ‌ ಕ್ಯಾಂಟರ್ ಉರುಳಿ ಬಿದ್ದು ಸ್ಥಳದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾದ ಘಟನೆ ಮದ್ದೂರು ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟದ ಎದುರು ನಡೆದಿದೆ.

ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಎರಗಿದ ಜವರಾಯ

ಗೆಜ್ಜಲಗೆರೆ ಮನ್ಮುಲ್ ಘಟಕದ ಹಾಲಿನ ಉತ್ಪನ್ನಗಳನ್ನು ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಬಸ್ಸಿಗಾಗಿ ಕಾಯುತ್ತಿದ್ದ ಒರ್ವ ಮಹಿಳೆ ಮತ್ತು ವ್ಯಕ್ತಿಯ ಮೇಲೆ ಟ್ಯಾಂಕರ್​ ಉರುಳಿ ಬಿದ್ದಿದೆ.

ವ್ಯಕ್ತಿಯನ್ನು‌ ತಕ್ಷಣವೇ ಮೇಲೆತ್ತಿ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ. ಆದರೆ ಮಹಿಳೆಯ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಮದ್ದೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ಜರುಗಿದೆ.

ABOUT THE AUTHOR

...view details