ಮಂಡ್ಯ:ಖಾಸಗಿ ಶಾಲಾ ವಾಹನ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ 30 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮರಲಗಾಲ ಬಳಿಯ ಬನ್ನೂರು ರಸ್ತೆಯಲ್ಲಿ ನಡೆದಿದೆ.
ಮಂಡ್ಯದಲ್ಲಿ ಶಾಲಾ ವಾಹನ-ಕಾರ್ ನಡುವೆ ಅಪಘಾತ: ಪ್ರಾಣಾಪಾಯದಿಂದ ಪಾರಾದ 30ಕ್ಕೂ ಹೆಚ್ಚು ಮಕ್ಕಳು! - accident between school bus and car latest news
ಖಾಸಗಿ ಶಾಲಾ ವಾಹನ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮರಲಗಾಲ ಬಳಿಯ ಬನ್ನೂರು ರಸ್ತೆಯಲ್ಲಿ ನಡೆದಿದೆ.
![ಮಂಡ್ಯದಲ್ಲಿ ಶಾಲಾ ವಾಹನ-ಕಾರ್ ನಡುವೆ ಅಪಘಾತ: ಪ್ರಾಣಾಪಾಯದಿಂದ ಪಾರಾದ 30ಕ್ಕೂ ಹೆಚ್ಚು ಮಕ್ಕಳು! Accident between school bus and car in Mandya](https://etvbharatimages.akamaized.net/etvbharat/prod-images/768-512-5634550-thumbnail-3x2-accident.jpg)
ಶಾಲಾ ವಾಹನ ಹಾಗೂ ಕಾರ್ ನಡುವೆ ಅಪಘಾತ: ಮಕ್ಕಳಿಗೆ ಸಣ್ಣಪುಟ್ಟ ಗಾಯ!
ಶ್ರೀರಂಗಪಟ್ಟಣದ ಪರಿವರ್ತನ ಶಾಲೆಗೆ ಸೇರಿದ ಬಸ್ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬಸ್ನಲ್ಲಿ ಚೀರಾಡುತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಶಾಲಾ ಬಸ್ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.