ಮಂಡ್ಯ:ಸಾರಿಗೆ ಸಂಸ್ಥೆ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವಿಗೀಡಾದ ಘಟನೆ ಮದ್ದೂರು ಸಮೀಪದ ಅಡಿಗಾಸ್ ಹೋಟೆಲ್ ಬಳಿ ನಡೆದಿದೆ.
ಸಾರಿಗೆ ಬಸ್‌ಗೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲಿಯೇ ಸಾವು - undefined
ಮೃತ ಸವಾರ
ಮದ್ದೂರು ತಾಲೂಕಿನ ಅಡಗನಹಳ್ಳಿ ಗ್ರಾಮದ ಕಾರ್ತಿಕ್ ಮೃತ ಬೈಕ್ ಸವಾರ. ಬೆಳಗ್ಗೆ ಗ್ರಾಮದಿಂದ ಮದ್ದೂರು ಪಟ್ಟಣಕ್ಕೆ ಆಗಮಿಸುತ್ತಿದ್ದಾಗ ಬಸ್‌ಗೆ ಬೈಕ್‌ನಿಂದ ಈತನೇ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಿಕರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.