ಕರ್ನಾಟಕ

karnataka

ETV Bharat / state

ಪೌತಿ ಖಾತೆ ಮಾಡಿಕೊಡಲು ಲಂಚ; ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ - ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಪೌತಿ ಖಾತೆ ಮಾಡಿಕೊಡಲು ಹಣ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಪೋಲಿಸರ ಬಲೆಗೆ ಬಿದ್ದಿದ್ದಾರೆ.

village accountant
ಗ್ರಾಮಲೆಕ್ಕಾಧಿಕಾರಿ

By

Published : Mar 9, 2021, 3:25 PM IST

ಮಂಡ್ಯ:ಪೌತಿ ಖಾತೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ಕಚೇರಿಯಲ್ಲಿ ‌ನಡೆದಿದೆ.

ಹನುಮಂತಪುರ ಗ್ರಾಮದ ಸಿ.ಚುಂಚಸ್ವಾಮಿ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ. ಇವರು ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಹುಲಿಗೆರೆಪುರ ಗ್ರಾಮದ ಕುಮಾರ್‌ರಿಂದ ಪೌತಿಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಹುಲಿಗೆರೆಪುರದಿಂದ ಹನುಮಂತಪುರಕ್ಕೆ ವರ್ಗಾವಣೆಯಾಗಿದ್ರೂ, ಪೌತಿಖಾತೆ ಮಾಡಿಕೊಡುವುದಾಗಿ ಕುಮಾರ್ ಬಳಿ 7 ಸಾವಿರ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿ ಇಂದು 3 ಸಾವಿರ ರೂ ಪಡೆಯುತ್ತಿದ್ದರು.

ಇದೀಗ ಗ್ರಾಮ ಲೆಕ್ಕಾಧಿಕಾರಿಯನ್ನು ಪೋಲಿಸರು ವಶಕ್ಕೆ ಪಡೆದು, ಮದ್ದೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details