ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಸುಮಲತಾ ಭೂಮಿ ಪೂಜೆ: ಇದರ ಹಿಂದಿದೆಯಾ ಅಭಿಷೇಕ್ ರಾಜಕೀಯ ಭವಿಷ್ಯ? - Acter Abhishek ambarish latest news

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜನತೆಗೆ ಮಾತು ಕೊಟ್ಟಂತೆ ನಡೆದುಕೊಂಡಿರುವ ಸಂಸದೆ ಸುಮಲತಾ ಅಂಬರೀಶ್​ ಅವರು, ಜಿಲ್ಲೆಯಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಹಿಂದೆ ಪುತ್ರ ಅಭಿಷೇಕ್ ಅಂಬರೀಶ್ ಅವರ ರಾಜಕೀಯ ಭವಿಷ್ಯದ ಚಿಂತನೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

abhishek-ambarish
ನಟ ಅಭಿಷೇಕ್ ಅಂಬರೀಶ್

By

Published : Sep 1, 2021, 6:00 PM IST

ಮಂಡ್ಯ: ಮಂಡ್ಯದಲ್ಲಿ ಮನೆ ಮಾಡೇ ಮಾಡ್ತೀವಿ ಅಂತಾ ಅಮ್ಮ ಮಾತು ಕೊಟ್ಟಿದ್ರು. ಹೀಗಾಗಿ‌, ನಾವು ಇಲ್ಲಿ ಮನೆ ನಿರ್ಮಾಣಕ್ಕೆ ಭೂಮಿ‌ ಪೂಜೆ ಮಾಡಿದ್ದೇವೆ ಎಂದು ನಟ, ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ತಿಳಿಸಿದ್ದಾರೆ.

ನಟ ಅಭಿಷೇಕ್ ಅಂಬರೀಶ್

ಭೂಮಿ ಪೂಜೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಮಂಡ್ಯದಲ್ಲಿ ಎರಡು ವರ್ಷ ಬಾಡಿಗೆ ಮನೆಯಲ್ಲಿದ್ವಿ. ಮನೆ ಕಟ್ಟೋಣಾ ಅಂತ ಈಗ ಶಶಿಯವರಿಂದ ಜಾಗ ತೆಗೆದುಕೊಂಡಿದ್ದೀವಿ. ಸಿಂಪಲ್ಲಾಗಿ ಮನೆ ಮಾಡ್ತಿದ್ದೀವಿ' ಎಂದರು.

ಸುಮ್ನಿರಣ್ಣಾ ಅದೆಲ್ಲ ಮಾತಾಡ್ಬೇಡಾ..

ಜನ ಬಯಸಿದ್ರೆ ಮದ್ದೂರು ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ಸುಮ್ನಿರಣ್ಣಾ ಅದೆಲ್ಲ ಮಾತಾಡ್ಬೇಡಾ. ಮೂರು ಸಲಾ ಕೇಳಿದ್ದೀರಿ, ಮೂರು‌ ಸಲಾ ಉತ್ತರ ಕೊಟ್ಟಿದ್ದೀನಿ. ಅಭಿಮಾನಿಗಳಿಗೆ ನಾವು ಜೊತೆಯಲ್ಲಿರಬೇಕು, ಬೆಳೆಯಬೇಕು ಎಂಬ‌ ಆಸೆ. ಹೀಗಾಗಿ, ಇಲ್ಲಿಯವರೆಗೂ ಬೆಳೆಸಿದ್ದಾರೆ. ಮುಂದಕ್ಕೂ ಬೆಳೆಸುತ್ತಾರೆ. ಚುನಾವಣೆಗೆ ಸ್ಪರ್ಧೆ ಮಾಡೋದು ನಮ್ಮ ಇಚ್ಛೆಯಲ್ಲ, ಅದು ಜನರ ಇಚ್ಛೆ. ಮುಂದಕ್ಕೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಓದಿ:ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಖಾಸಗೀಕರಣಗೊಳಿಸಿದ್ದೇ ಬಿಜೆಪಿಯ ಸಾಧನೆ: ಸಚಿನ್ ಪೈಲಟ್

ABOUT THE AUTHOR

...view details