ಕರ್ನಾಟಕ

karnataka

ETV Bharat / state

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆತ್ತಲೆಯಾಗಿ ಯುವಕನ ಹೈಡ್ರಾಮಾ! - ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಯುವಕ ಬೆತ್ತಲೆ ಡ್ಯಾನ್ಸ್

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಯುವಕ ಬೆತ್ತಲೆಯಾಗಿ ಕುಣಿದು ಆತಂಕ ಮೂಡಿಸಿದ ಘಟನೆ ಇಂದು ನಡೆದಿದೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆತ್ತಲೆಯಾದ ಯುವಕ,naked dance in melukote chaluvanarayanswamy temple
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆತ್ತಲೆಯಾದ ಯುವಕ

By

Published : Dec 17, 2021, 4:32 PM IST

Updated : Dec 17, 2021, 5:22 PM IST

ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಯುವಕನೋರ್ವ ಹುಚ್ಚಾಟ ನಡೆಸಿದ ಘಟನೆ ನಡೆದಿದೆ. ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಯುವಕ ಬೆತ್ತಲೆಯಾಗಿ ಡ್ಯಾನ್ಸ್ ಮಾಡಿದ್ದಲ್ಲದೇ, ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದಾನೆ. ಆದರೆ ದೇವಾಲಯದ ಸಿಬ್ಬಂದಿ, ಯುವಕನನ್ನು ತಡೆದಿದ್ದಾರೆ.

ದೇವಾಲಯದ ಭದ್ರತಾ ಸಿಬ್ಬಂದಿಗೂ ಹೆದರದೇ ಯುವಕ ಕೆಲಕಾಲ ಹುಚ್ಚಾಟ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಗರ್ಭಗುಡಿ ಬಾಗಿಲು ಬಂದ್ ಮಾಡಿ ಬೆದರಿಸಿ ಯುವಕನನ್ನು ಹೊರಗೆ ಕಳುಹಿಸಿದ್ದಾರೆ. ಯುವಕ ಯಾರು, ಎಲ್ಲಿಯವನು, ಯಾಕೆ ಈ ರೀತಿ ಹುಚ್ಚಾಟ ನಡೆಸಿದ ಎಂಬುದು ತಿಳಿದುಬಂದಿಲ್ಲ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆತ್ತಲೆಯಾಗಿ ಯುವಕನ ಹೈಡ್ರಾಮಾ

(ಇದನ್ನೂ ಓದಿ: ಇಂದಿನಿಂದ 10 ದಿನಗಳವರೆಗೆ ಉತ್ತರ ಕೊರಿಯಾ ಜನರು ನಗುವಂತಿಲ್ಲ.. ವಿಚಿತ್ರ ನಿರ್ಬಂಧಕ್ಕೆ ಕಾರಣ ಗೊತ್ತಾ?)

Last Updated : Dec 17, 2021, 5:22 PM IST

ABOUT THE AUTHOR

...view details