ಮಂಡ್ಯ :ಸಾಲಬಾಧೆ ತಾಳಲಾರದೆ ಯುವ ರೈತನೊಬ್ಬ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಲ ಬಾಧೆ- ಯುವ ರೈತ ಆತ್ಮಹತ್ಯೆ - undefined
ಕೃಷಿಗಾಗಿ ಬ್ಯಾಂಕಿನಲ್ಲಿ 50 ಸಾವಿರ ಕೈ ಸಾಲ ಎಂಬಂತೆ 4 ಲಕ್ಷ ರೂಪಾಯಿ ಸಾಲಮಾಡಿ ಅದನ್ನು ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
![ಸಾಲ ಬಾಧೆ- ಯುವ ರೈತ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-3231104-thumbnail-3x2-ntnl.jpg)
ಯುವ ರೈತ ಆತ್ಮಹತ್ಯೆ
ಗ್ರಾಮದ ಚನ್ನೇಗೌಡರ ಪುತ್ರ ನಾಗೇಂದ್ರ(25) ಅತ್ಮಹತ್ಯೆ ಮಾಡಿಕೊಂಡ ಯುವ ರೈತನಾಗಿದ್ದು, ತಾಯಿ ಪ್ರೇಮ ಹೆಸರಿನಲ್ಲಿರುವ ಎರಡು ಎಕರೆ ಜಮೀನಿನ ಬೆಳೆಗಾಗಿ ಕಿರುಗಾವಲು ಐಒಬಿ ಬ್ಯಾಂಕಿನಲ್ಲಿ 50 ಸಾವಿರ ಹಾಗೂ ಕೈ ಸಾಲ ಸೇರಿದಂತೆ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಕ್ಕೆ ಕಾರಣವಾಯಿತಾ ಐಪಿಎಲ್ : ಕೃಷಿಯ ಜೊತೆಗೆ ಐಪಿಎಲ್ ಬೆಟ್ಟಿಂಗ್ ಕೂಡ ನಡೆಸುತ್ತಿದ್ದು, ಸಾಲ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ. ಹೀಗಾಗಿ 4 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.