ಮಂಡ್ಯ:ಜಿಲ್ಲೆಯ ಕೆ.ಆರ್.ಎಸ್.ಡ್ಯಾಂ ಸುತ್ತಮುತ್ತ ಭೂ ವಿಜ್ಞಾನಿಗಳು ಗಣಿಗಾರಿಕೆ ಅಪಾಯದ ಕುರಿತು ಅಧ್ಯಯನ ನಡೆಸಿದರು.
ರಾಜ್ಯ ಸರ್ಕಾರಕ್ಕೆ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ನೀಡಿಲಿರೋ ಹಿರಿಯ ವಿಜ್ಞಾನಿಗಳ ತಂಡ ಡ್ಯಾಂ ನ 20 ಕಿ.ಮೀ. ವ್ಯಾಪ್ತಿಯಲ್ಲಿರೋ ಬೇಬಿಬೆಟ್ಟ, ಬನ್ನಂಗಾಡಿ, ನೀಲಕೊಪ್ಪಲು ಸೇರಿ ಹಲವು ಕಲ್ಲು ಕ್ವಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಆರ್.ಎಸ್. ಡ್ಯಾಂ ಸುತ್ತಮುತ್ತ ಗಣಿಗಾರಿಕೆ ಅಪಾಯದ ಕುರಿತು ಅಧ್ಯಯನ ಜಾರ್ಖಂಡ್ ನಿಂದ ಬಂದಿರೋ ಹಿರಿಯ ಭೂವಿಜ್ಞಾನಿ ಡಾ.ಸಿ.ಸೋಮಲಿನಾ ನೇತೃತ್ವದಲ್ಲಿ ತಂತ್ರಜ್ಞರಾಗಿದ್ದು, ಸ್ಥಳೀಯ ಜನರು ಸೇರಿದಂತೆ ಜಿಲ್ಲೆಯ ಸ್ಥಳೀಯ ಅಧಿಕಾರಿಗಳಿಂದ ವಿಜ್ಞಾನಿಗಳು ಮಾಹಿತಿ ಪಡೆದಿದ್ದಾರೆ.
ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕೋ ಇಲ್ಲವೋ ಅನ್ನೋದ್ರ ಕುರಿತಾಗಿ ವಿಜ್ಞಾನಿಗಳ ವರದಿ ಮೇಲೆ ಸರ್ಕಾರ ನಿರ್ಧಾರ ಮಾಡಲಿದೆ. ಸದ್ಯ ಜಿಲ್ಲೆಯ ರೈತರು, ಸಾರ್ವಜನಿಕರು ಸೇರಿದಂತೆ ಹಲವು ಸಂಘಟನೆಗಳಿಂದ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯಿಸಿದ್ದಾರೆ.
ಓದಿ : ಶಾಸಕ ಸಂಗಮೇಶ್ ಅಮಾನತು ವಿಚಾರಕ್ಕೆ ಸದನದಲ್ಲಿ 2ನೇ ದಿನವೂ ಗದ್ದಲ: ವಿಡಿಯೋ