ಮಂಡ್ಯ:ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಿರುವ ಪ್ರಕರಣ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ.
ಬಿ.ಟಿ. ಕೃಷ್ಣೇಗೌಡ ಬಂಧಿತ ಶಿಕ್ಷಕ. ಈತ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಪೌಢ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಕಾಮುಕ ಮೇಷ್ಟ್ರು ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿ ಚಪಲ ತೀರಿಸಿಕೊಳ್ಳುತ್ತಿದ್ದ ಎಂದು ಆರೋಪಿಸಿ ಬಿಇಒ ಬಳಿ ದೂರು ನೀಡಲಾಗಿತ್ತು. ಬಿಇಒ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಮಂಡ್ಯದಲ್ಲಿ ಶಿಕ್ಷಕ ಅರೆಸ್ಟ್
ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡ್ತಿದ್ದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅನುಚಿತವಾಗಿ ವರ್ತಿಸುತ್ತಿದ್ದ ಶಿಕ್ಷಕನ ಕಾಟ ತಾಳಲಾರದೇ ಇಬ್ಬರು ವಿದ್ಯಾರ್ಥಿನಿಯರು ಮನನೊಂದು ತಮ್ಮ ಪೋಷಕರ ಮುಂದೆ ಕಣ್ಣೀರಿಟ್ಟಿದ್ದಾರೆ. ಮರ್ಯಾದೆಗೆ ಅಂಜಿದ ಪೋಷಕರು ಶಿಕ್ಷಕನಿಗೆ ದೂರು ನೀಡದೇ ಗದರಿಸಿ ಸುಮ್ಮನಾಗಿದ್ದರು. ಶಿಕ್ಷಕ ಕೃಷ್ಣೇಗೌಡನ ಕಾಮಚೇಷ್ಠೆ ಬಗ್ಗೆ ಕೆಲವರು ಬಿಇಒ ಬಸವರಾಜುಗೆ ಮಾಹಿತಿ ನೀಡಿದ್ರು. ಬಳಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದ ಬಿಇಒ ಕೃಷ್ಣೇಗೌಡನ ಅನುಚಿತ ವರ್ತನೆ ಬಗ್ಗೆ ಮಕ್ಕಳು ಖಚಿತಪಡಿಸಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಇಒ ದೂರಿನನ್ವಯ ಶಿಕ್ಷಕ ಕೃಷ್ಣೇಗೌಡನ ವಿರುದ್ಧ ಕೆ.ಆರ್.ಪೇಟೆ ಪೊಲೀಸ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕನ ವಿರುದ್ಧ ಪೊಲೀಸರು ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.