ಮಂಡ್ಯ/ಪಾಂಡವಪುರ :ಸಾಲಬಾಧೆಯಿಂದ ಮನನೊಂದು ತಾಯಿ ಮತ್ತು ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಪ್ರವಾಸಿ ಕ್ಷೇತ್ರ ಕುಂತಿಬೆಟ್ಟದ ಸಮೀಪ ನಡೆದಿದೆ.
ಪಾಂಡವಪುರ ತಾಲೂಕಿನ ದೇವೇಗೌಡನ ಕೊಪ್ಪಲು ಗ್ರಾಮದ ಭಾರತಿ ಹಾಗೂ ಪುತ್ರಿ ನಯನ ಕುಂತಿಬೆಟ್ಟದ ಸಮೀಪವಿರುವ ಜಮೀನು ಬಾವಿಗೆ ಹಾರಿ ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳ ಹಿಂದಷ್ಟೇ ಪುತ್ರ ಮೃತಪಟ್ಟಿದ್ದ.
ಸಾಲದಿಂದ ಮನನೊಂದ ತಾಯಿ ಭಾರತಿ, ತನ್ನ ಮಗಳೊಂದಿಗೆ ಕುಂತಿಬೆಟ್ಟದ ಸಮೀಪದ ಜಮೀನಿಗೆ ಬಂದು ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನೋಡಿದಾಗ, ತಾಯಿ-ಮಗಳ ಮೃತದೇಹ ನೀರಿನಲ್ಲಿ ತೇಲುತ್ತಿದ್ದವು.
ಸಾಲದ ಜೊತೆಗೆ ಮಗನೂ ಮೃತಪಟ್ಟಿದ್ದರಿಂದ ನೊಂದ ತಾಯಿ ತನ್ನ ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ:3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ