ಮಂಡ್ಯ:ವಿವಾಹಿತನೊಬ್ಬ ಮದುವೆಯಾಗುವುದಾಗಿ ನಂಬಿಸಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಮತಾಂತರ ಆಗುವಂತೆ ಒತ್ತಡ ಹಾಕುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ನ.11ರಂದು ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ.
ಏನಿದು ಪ್ರಕರಣ?: 25 ವರ್ಷದ ವಿವಾಹಿತ ಯೂನಸ್ ಪಾಷಾ ಎಂಬಾತ ತನ್ನ ಎದುರು ಮನೆಯಲ್ಲಿ ವಾಸವಿದ್ದ 13 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳಸಿದ್ದ. ಅಲ್ಲದೇ ಹೆತ್ತವರಿಗೆ ತಿಳಿಯದಂತೆ ಆ ಬಾಲಕಿಗೆ ಮೊಬೈಲ್ ಸಹ ಕೊಡಿಸಿದ್ದನಂತೆ. ಬಳಿಕ ಬಾಲಕಿಯೊಂದಿಗೆ ಸಲಹೆ ಬೆಳಸಿಕೊಂಡ ಯೂನಸ್, ಆಕೆಗೆ ವಿಡಿಯೋ ಕಾಲ್ ಮಾಡಿ ಬಾಲಕಿಯ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಹೀಗೆ ಸಲಹೆ ಬೆಳೆಸಿಕೊಂಡ ವಿವಾಹಿತ ಯೂನಸ್ ಮತಾಂತರ ಆಗುವಂತೆ ಬಾಲಕಿಯನ್ನು ಒತ್ತಾಯಿಸಿದ್ದ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಮತಾಂತರ ಆಗದಿದ್ದರೆ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಇನ್ನು ಬಾಲಕಿಯ ಪೋಷಕರು ಇದೇ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿ ಮೇಲೆ ಯೂನಸ್ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.