ಮಂಡ್ಯ: ಅತಿರೇಕದ ವರ್ತನೆ ನಿಲ್ಲಿಸುವಂತೆ ಸ್ಯಾಂಡಲ್ವುಡ್ ನಟ, ನಿರ್ಮಾಪಕ ಹುಚ್ಚ ವೆಂಕಟ್ಗೆ ಸಾರ್ವಜನಿಕರು ಬುದ್ಧಿವಾದ ಹೇಳಿದ್ದಾರೆ.
ಅವರದೇ ಸ್ಟೈಲ್ನಲ್ಲಿ ಹುಚ್ಚ ವೆಂಕಟ್ಗೆ ಸಾರ್ವಜನಿಕರಿಂದ ಕ್ಲಾಸ್...ವಿಡಿಯೋ - ಚೆನ್ನೈ
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ಗೆ ಪಾಂಡವಪುರದ ಸಾರ್ವಜನಿಕರು ಬುದ್ಧಿ ಮಾತು ಹೇಳಿದ್ದಾರೆ. ಒಳ್ಳೆ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳಿದ್ದಾರೆ.
ವೆಂಕಟ್ ನಿನ್ನೆ ಮಡಿಕೇರಿಯಲ್ಲಿ ರಾದ್ದಾಂತ ಮಾಡುವ ಮುಂಚೆ ಪಾಂಡವಪುರದಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ವೇಳೆ, ವ್ಯಕ್ತಿಯೊಬ್ಬ ನಡು ಬೀದಿಯಲ್ಲಿಯೇ ವೆಂಕಟ್ ಅವರಿಗೆ ಬುದ್ಧಿಮಾತು ಹೇಳಿದ್ದಾರೆ. ಹೀಗೆಲ್ಲ ವರ್ತಿಸಬಾರದು ಎಂದು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಇವರ ಮಾತಿಗೆ ಬೆಲೆ ಕೊಡದ ವೆಂಕಟ್, ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ಆ ವ್ಯಕ್ತಿ ಸ್ವಲ್ಪ ಏರು ಧ್ವನಿಯಲ್ಲಿಯೇ ಅಶ್ಲೀಲ ಪದಗಳಿಂದ ಹುಚ್ಚ ವೆಂಕಟ್ಗೆ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಈ ಟಿವಿ ಭಾರತ್ಗೆ ಲಭ್ಯವಾಗಿದೆ.
ಇನ್ನು ನಿನ್ನೆ ವೆಂಕಟ್ ಮಡಿಕೇರಿಯಲ್ಲಿ ಕಾರಿನ ಗ್ಲಾಸ್ ಪುಡಿ ಮಾಡಿ ಸಾರ್ವಜನಿಕರಿಂದ ಗೂಸಾ ಸಹ ತಿಂದಿದ್ದರು. ಕಳೆದ ವಾರ ಚೆನ್ನೈನಲ್ಲಿ ಹುಚ್ಚರಂತೆ ಅಲೆದು ಸುದ್ದಿಯಾಗಿದ್ದರು.