ಮಂಡ್ಯ:ಮೀನು ಹಿಡಿಯಲೆಂದು ಬಲೆ ಬಿಡಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಗೊಲ್ಲರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು - ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು
ಮಂಡ್ಯದ ಗ್ರಾಮವೊಂದರಲ್ಲಿ ಮೀನು ಹಿಡಿಯಲೆಂದು ಬಲೆ ಬಿಡಲು ಹೋಗಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ತೆಪ್ಪದಿಂದ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ವ್ಯಕ್ತಿ ಸಾವು
ಗೊಲ್ಲರ ಕೊಪ್ಪಲು ಗ್ರಾಮದ ನಿವಾಸಿ ನಾರಾಯಣ್ ಮೃತಪಟ್ಟವರು. ಮಧ್ಯಾಹ್ನ ಮೀನು ಹಿಡಿಯಲು ತೆಪ್ಪದ ಮೂಲಕ ಕೆರೆ ಮಧ್ಯ ಭಾಗಕ್ಕೆ ಹೋಗಿ ಬಲೆ ಬೀಸುವಾಗ ಆಯಾತಪ್ಪಿ ಬಿದ್ದು ಸಾವಿನಪ್ಪಿರುವುದಾಗಿ ತಿಳಿದು ಬಂದಿದೆ.
ಕೆರೆಯಲ್ಲಿ ಮುಳುಗಿರುವ ವ್ಯಕ್ತಿಯ ಹೊರ ತೆಗೆಯುತ್ತಿರುವ ದೃಷ್ಯ
ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಶವವನ್ನು ಹೊರಕ್ಕೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.