ಮಂಡ್ಯ:ಸದ್ಯ ಜಿಲ್ಲೆಯಲ್ಲಿ ಗಣಿಕಾರಿಗೆ ವಿಚಾರ ಚರ್ಚೆಯಾಗ್ತಿದೆ. ಗಣಿಕಾರಿಕೆಗೆ ರೈತರು ಮತ್ತು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗ್ತಿದೆ. ಬೇಬಿ ಬೆಟ್ಟದಲ್ಲಿ ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆಯುತ್ತಿದ್ದ ಪರೀಕ್ಷಾರ್ಥ ಸ್ಫೋಟ ಪ್ರಕ್ರಿಯೆ ವಿರೋಧದಿಂದಾಗಿ ಒಂದೇ ದಿನಕ್ಕೆ ಸ್ಥಗಿತಗೊಂಡಿತ್ತು. ಆದ್ರೆ ಕಲ್ಲು ಗಣಿಗಾರಿಕೆ ನಿಲ್ಲಿಸಿದ ಕಾರಣ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಪಾಂಡವಪುರ ತಾಲೂಕಿನ ಕಾವೇರಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಂಜುನಾಥ್ (33) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಮಂಜುನಾಥ್ ರೂ. 4 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಂತುಹೋಗಿತ್ತು. ಇದರಿಂದ ಕಂಗಲಾಗಿದ್ದ ಮಂಜುನಾಥ್ ಆರ್ಥಿಕ ಪರಿಸ್ಥಿತಿಯಿಂದಲೂ ಜರ್ಜರಿತನಾಗಿದ್ದರು ಎಂದು ತಿಳಿದು ಬಂದಿದೆ.