ಕರ್ನಾಟಕ

karnataka

ETV Bharat / state

ತಮ್ಮದೇ ಖರ್ಚಿನಲ್ಲಿ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ; ಮದ್ದೂರಿನಲ್ಲೊಂದು ಸಮಾಜಮುಖಿ ತಂಡ - Mandya news

ಮದ್ದೂರು ಪಟ್ಟಣದ ಅಪ್ಪು ಮತ್ತವರ ತಂಡದ ಸದಸ್ಯರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ಮೃತಪಟ್ಟರೆ ಸ್ವಯಂ ತಾವೇ ತೆರಳಿ ಆ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಡೆಸುತ್ತಾರೆ.

Madduru
Madduru

By

Published : May 13, 2021, 7:08 PM IST

Updated : May 13, 2021, 8:44 PM IST

ಮಂಡ್ಯ:ಜಿಲ್ಲೆಯ ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್​ನಿಂದ ಮೃತಪಟ್ಟ ಸೋಂಕಿತರನ್ನು ಅಂತ್ಯ ಸಂಸ್ಕಾರ ಮಾಡುವ ಮೂಲಕ ಮದ್ದೂರಿನ‌ ಯುವಕರ ತಂಡವೊಂದು ಸಮಾಜ ಸೇವೆಗೆ ಮುಂದಾಗಿದೆ.

ಮದ್ದೂರು ಪಟ್ಟಣದ ಅಪ್ಪು ಮತ್ತವರ ತಂಡದ ಸದಸ್ಯರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ಮೃತಪಟ್ಟರೆ ಸ್ವಯಂ ತಾವೇ ತೆರಳಿ ಆ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಡೆಸುವ ಮೂಲಕ ಸಾಮಾಜಿಕ ಸೇವೆ ಮಾಡಲು ಮುಂದಾಗಿದ್ದಾರೆ.

ಇವರು ತಮ್ಮದೇ ಖರ್ಚಿನಲ್ಲಿ ಪಿಪಿಇ ಕಿಟ್ ಖರೀದಿಸಿ, ಮೃತರ ಅಂತ್ಯ ಸಂಸ್ಕಾರ ಮಾಡುತ್ತಿದ್ದು, ಬಳಿಕ ಮೃತರ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ‌.

ಮದ್ದೂರಿನಲ್ಲೊಂದು ಸಮಾಜಮುಖಿ ತಂಡ
Last Updated : May 13, 2021, 8:44 PM IST

ABOUT THE AUTHOR

...view details