ಮಂಡ್ಯ:ತಾಯಿಯೊಂದಿಗೆ ಜಮೀನಿಗೆ ಹೋಗಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಾಗಮಂಗಲ ತಾಲೂಕಿನ ಬಸವನಗುಡಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಈಜಲು ತೆರಳಿದ್ದ ಬಾಲಕ: ಹೆತ್ತ ತಾಯಿ ಮುಂದೆಯೇ ನೀರು ಪಾಲಾದ - ಮಂಡ್ಯ
ತಾಯಿಯೊಂದಿಗೆ ಜಮೀನಿಗೆ ತೆರಳಿದ್ದ ಮಗ ಬಳಿಕ ಅಲ್ಲಿಂದ ಈಜಲು ಹೋಗಿ ನೀರು ಪಾಲಾದ ಘಟನೆ ಬಸವನಗುಡಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಬಾಲಕ
ಗ್ರಾಮದ ಹುಚ್ಚಪ್ಪ ಎಂಬುವವರ ಪುತ್ರ ಆನಂದ್(13) ಮೃತ ಬಾಲಕ. ತಾಯಿಯ ಜೊತೆ ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಈಜಲು ತೆರಳಿ ಸಾವಿಗೀಡಾಗಿದ್ದಾನೆ. ತಾಯಿಯ ಕಣ್ಣ ಮುಂದೆಯೇ ಘಟನೆ ನಡೆದಿದ್ದು, ಆಕೆ ಕಾಪಾಡುವಲ್ಲಿ ಅಸಹಾಯಕಳಾಗಿದ್ದಳು.
ಘಟನೆ ಕುರಿತು ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.