ಮಂಡ್ಯ:ಕೆ.ಆರ್.ಪೇಟೆ ತಾಲೂಕಿನ ಮಾಳಗೂರು ಗ್ರಾಮದ ಬಡ ಕುಟುಂಬವೊಂದು ಗಂಡು ದಿಕ್ಕಿಲ್ಲದೇ, ವಸತಿ ಯೋಜನೆಗಳ ನೆರವೂ ಸಿಗದೇ ಮುರುಕಲು ಮನೆಯಲ್ಲೇ ಜೀವಿಸುತ್ತ ನೆರವಿಗಾಗಿ ಹಪಹಪಿಸುತ್ತಿದೆ.
ಮಳೆ ಬಂದ್ರೆ ಬೇರೆಯವರ ಮನೆಯಲ್ಲೇ ಆಶ್ರಯ: ಮುರುಕಲು ಮನೆಯಲ್ಲಿರೋ ವೃದ್ಧೆಗೆ ಬೇಕಿದೆ ನೆರವು - women waiting for help
ಕುಡಿಯಲು ನೀರಿಲ್ಲ, ವಿದ್ಯುತ್ ಇಲ್ಲ. ಮಳೆ ಬಂದರೆ ದೂರದ ಯಾವುದಾದರೂ ಮನೆಯಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ. ಮಳೆ ನಿಂತ ಬಳಿಕ ಮತ್ತದೇ ಮನೆಯಲ್ಲೇ ವಾಸಿಸುತ್ತ ಜೀವನ ಸಾಗಿಸುತ್ತಿದೆ ಈ ಕುಟುಂಬ.
70 ವರ್ಷದ ನಂಜಮ್ಮ ಎಂಬುವರು ಮಗಳು ಮಂಜಮ್ಮ ಹಾಗೂ ಮೊಮ್ಮಗ 10 ವರ್ಷದ ಗಗನ್ ಜೊತೆ ಮಾಳಗೂರು ಗ್ರಾಮದ ಹೊರ ಭಾಗದಲ್ಲಿನ ಮುರುಕಲು ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಕುಡಿಯಲು ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲ. ಮಳೆ ಬಂದರೆ ದೂರದ ಯಾವುದಾದರೂ ಮನೆಯಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಇದೆ. ಪುನಃ ಮಳೆ ನಿಂತ ಬಳಿಕವೇ ಮತ್ತೆ ಮನೆಗೆ ಬಂದು ಜೀವನ ಸಾಗಿಸಬೇಕಾದ ದುಸ್ಥಿತಿ ಇದೆ.
ವಸತಿ ಯೋಜನೆಗಳಡಿ ಸಹಾಯ ಪಡೆದು ಮನೆ ಕಟ್ಟಿಕೊಳ್ಳಲು ಗ್ರಾಮ ಪಂಚಾಯತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಯೋಜನೆ ಮಂಜೂರು ಆಗಿಲ್ಲ ಎನ್ನುತ್ತಾರೆ ನಂಜಮ್ಮ. ದಾನಿಗಳು ಈ ಕುಟುಂಬಕ್ಕೆ ನೆರವಿನ ಹಸ್ತ ಚಾಚಿ, ಮೊಮ್ಮಗನ ಭವಿಷ್ಯಕ್ಕೆ ಮಾರ್ಗದರ್ಶಕರಾಗಬೇಕಿದೆ.