ಮಂಡ್ಯ: ಕೈಗಾರಿಕಾ ಉದ್ದೇಶಕ್ಕೆ ರವಾನೆಯಾಗುತ್ತಿದ್ದ 64 ಖಾಲಿ ಜಂಬೋ (ಡಿಟೈಪ್) ಆಕ್ಸಿಜನ್ ಸಿಲಿಂಡರ್‌ಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಮಂಡ್ಯ: 64 ಖಾಲಿ ಆಕ್ಸಿಜನ್ ಸಿಲಿಂಡರ್ ವಶ
ಮೈಸೂರಿನಿಂದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ರವಾನೆಯಾಗುತ್ತಿದ್ದ 64 ಖಾಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ತಹಶೀಲ್ದಾರ್ ಚಂದ್ರಶೇಖರ ಶಂ.ಗಾಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ: 64 ಖಾಲಿ ಆಕ್ಸಿಜನ್ ಸಿಲಿಂಡರ್ ವಶ
ಮೈಸೂರಿನಿಂದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಇವುಗಳನ್ನು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಚಂದ್ರಶೇಖರ ಶಂ.ಗಾಳಿ ಮತ್ತು ಸಿಬ್ಬಂದಿ ತಾಲೂಕಿನ ಯಲಿಯೂರು ಬಳಿ ದಾಳಿ ನಡೆಸಿದ್ದಾರೆ.
ಖಾಲಿ ಸಿಲಿಂಡರ್‌ಗಳಲ್ಲಿ ಆಕ್ಸಿಜನ್ ಫಿಲ್ಲಿಂಗ್ ಮಾಡಿ ವೈದ್ಯಕೀಯ ಉಪಯೋಗಕ್ಕೆ ಬಳಸಬಹುದು. ಹೀಗಾಗಿ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಿಲಿಂಡರ್‌ಗಳನ್ನು ನಗರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಇಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.