ಮಂಡ್ಯ :ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದಾರೆ. ಶೇ.63.17ರಷ್ಟು ಮಂದಿ ಈಗಾಗಲೇ ಗುಣಮುಖರಾಗಿರೋದು ಜಿಲ್ಲೆಯ ಜನರಲ್ಲಿ ನೆಮ್ಮದಿ ತರಿಸಿದೆ.
ಕೊರೊನಾಗೆ ಸೆಡ್ಡು ಹೊಡೆದ ಸಕ್ಕರೆ ನಾಡು.. ಸೋಂಕಿತರಲ್ಲಿ ಶೇ.63% ಮಂದಿ ಗುಣಮುಖ.. - latest corona news
ಈವರೆಗೂ 334 ಮಂದಿ ಸೋಂಕಿತರು ಕಂಡು ಬಂದಿದ್ದರು. ಇದರಲ್ಲಿ 211 ಮಂದಿ ಗುಣಮುಖರಾಗಿದ್ದಾರೆ. ಸದ್ಯ 123 ಪ್ರಕರಣ ಮಾತ್ರ ಸಕ್ರೀಯವಾಗಿವೆ.
ಕೊರೊನಾಗೆ ಸೆಡ್ಡು ಹೊಡೆದ ಜಿಲ್ಲೆ
ಜಿಲ್ಲೆಯಲ್ಲಿ ಈವರೆಗೂ 334 ಮಂದಿ ಸೋಂಕಿತರು ಕಂಡು ಬಂದಿದ್ದರು. ಇದರಲ್ಲಿ 211 ಮಂದಿ ಗುಣಮುಖರಾಗಿದ್ದಾರೆ. ಸದ್ಯ 123 ಸಕ್ರಿಯ ಪ್ರಕರಣ ಮಾತ್ರ ಇವೆ. ಅಂದ್ರೆ ಶೇ.63% ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.
ಇಂದು ಕೂಡ 42 ಮಂದಿ ಗುಣಮುಖರಾಗಿದ್ದಾರೆ. ಆದರೆ, ಕೇವಲ ಒಂದು ಪ್ರಕರಣ ಇವತ್ತು ಹೊಸದಾಗಿ ಪತ್ತೆಯಾಗಿದೆ. ಒಟ್ಟು 334 ಮಂದಿ ಸೋಂಕಿತರು ಜಿಲ್ಲೆಯಲ್ಲಿ ಕಂಡು ಬಂದಿದ್ದರು. ಇಷ್ಟು ಪ್ರಮಾಣದಲ್ಲಿ ಗುಣಮುಖರಾಗಿದ್ದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಜತೆಗೆ ಮಿಮ್ಸ್ ವೈದ್ಯರ ಚಿಕಿತ್ಸಾ ವಿಧಾನಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ.