ಮಂಡ್ಯ: ಜಿಲ್ಲೆಯಲ್ಲಿ ಇಂದು ದಾಖಲೆಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಳಗಿನ ವರದಿಯಲ್ಲಿ 62 ಮಂದಿಗೆ ಕೋವಿಡ್- 19 ಇರುವುದು ದೃಢಪಟ್ಟಿದ್ದರೆ, ಸಂಜೆ ವೇಳೆಗೆ ಮತ್ತೆ 9 ಮಂದಿ ಸೇರ್ಪಡೆಗೊಳ್ಳುವ ಮೂಲಕ ಸೋಂಕಿತರ ಸಂಖ್ಯೆ 71ಕ್ಕೆ ತಲುಪಿದೆ.
ಮಂಡ್ಯವನ್ನು ಮುಂಬೈ ಮಾಡಿದ ಕೊರೊನಾ: ಒಂದೇ ದಿನ 71 ಪ್ರಕರಣ ಪತ್ತೆ! - corona news in mandya
ಮುಂಬೈ ನಂಟಿನಿಂದ ಮಂಡ್ಯ ಜಿಲ್ಲೆ ಈಗ ರಾಜ್ಯದ ಕೊರೊನಾ ಹಾಟ್‌ಸ್ಪಾಟ್ ಆಗಿದೆ. ಇಂದು ಒಂದೇ ದಿನ 71 ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
![ಮಂಡ್ಯವನ್ನು ಮುಂಬೈ ಮಾಡಿದ ಕೊರೊನಾ: ಒಂದೇ ದಿನ 71 ಪ್ರಕರಣ ಪತ್ತೆ! 62 more corona possitive cases at mandya](https://etvbharatimages.akamaized.net/etvbharat/prod-images/768-512-7259771-126-7259771-1589878369791.jpg)
ಇವರೆಲ್ಲಾ ಮುಂಬೈನಿಂದ ಮಂಡ್ಯ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಇನ್ನು ಒಂದೇ ದಿನ 71 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಒಂದೂವರೆ ಶತಕ ಬಾರಿಸಿದಂತಾಗಿದೆ. ಇವರಲ್ಲಿ 31 ಪುರುಷರು 25 ಮಹಿಳೆಯರು ಹಾಗೂ 15 ಮಕ್ಕಳು ಇದ್ದಾರೆ. ಸದ್ಯ ಮಂಡ್ಯ ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದ್ದು, ರೆಡ್ ಝೋನ್ಗೆ ಸೇರಿದೆ.
ಇವರಲ್ಲಿ 50 ವರ್ಷ ದಾಟಿರುವವರು 8 ಮಂದಿ ಇದ್ದಾರೆ. ಈ ಎಲ್ಲಾ ಪ್ರಕರಣಗಳು ಮುಂಬೈನಿಂದ ಬಂದವರೇ ಆಗಿದ್ದು, ಎಲ್ಲರೂ ನೇರವಾಗಿ ಕ್ವಾರಂಟೈನ್ ಒಳಗಾಗಿದ್ದವರೇ ಆಗಿದ್ದಾರೆ. ಸದ್ಯ ಕೆ.ಆರ್.ಪೇಟೆಯಲ್ಲಿ 95 ಹಾಗೂ ನಾಗಮಂಗಲದ 22 ಮಂದಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ಯಾವ ತಾಲೂಕಿನವರು ಎಂಬುದು ಗೊತ್ತಾಗಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 160 ಪ್ರಕರಣಗಳಾಗಿದ್ದು, ಇವರಲ್ಲಿ 21 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.