ಕರ್ನಾಟಕ

karnataka

ETV Bharat / state

ನೀರು ತುಂಬಿದ ಬಕೆಟ್​​ಗೆ ಬಿದ್ದು 6 ತಿಂಗಳ ಮಗು ಸಾವು.. ಮಂಡ್ಯದಲ್ಲಿ ದುರಂತ! - 6 Month old child died in mandya

ನೀರು ತುಂಬಿದ ಬಕೆಟ್​​ಗೆ ಬಿದ್ದು 6 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

6 Month old child died in mandya
ನೀರು ತುಂಬಿದ ಬಕೆಟ್​​ಗೆ ಬಿದ್ದು 6 ತಿಂಗಳ ಮಗು ಸಾವು

By

Published : Jul 22, 2021, 3:24 PM IST

ಮಂಡ್ಯ: ಮನೆಯಲ್ಲಿ ಖುಷಿ ಖುಷಿಯಾಗಿ ಆಟವಾಡ್ತಿದ್ದ 6 ತಿಂಗಳ ಮಗು ನೀರು ತುಂಬಿದ ಬಕೆಟ್​​ಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಮ್ಮಡಹಳ್ಳಿಯ ಮರಕಾಡದೊಡ್ಡಿ ಬಡಾವಣೆ ಕಿರಣ್ ಹಾಗು ಸುವರ್ಣ ದಂಪತಿಗೆ ಸೇರಿದ ಗಂಡು ಮಗು ಇದಾಗಿದೆ. ನೀರು ತುಂಬಿದ ಬಕೆಟ್​​ನಲ್ಲಿ ಆಟವಾಡುವ ವೇಳೆ ಮುಳುಗಿ ಮಗು ಅದರಲ್ಲಿ ಮುಳುಗಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಮಗುವಿನ ಮೃತ ದೇಹ

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details