ಮಂಡ್ಯ: ಕೊರೊನಾ ಸೋಂಕಿತರಲ್ಲಿ ಇಂದೂ 53 ಮಂದಿ ಗುಣಮುಖರಾಗಿದ್ದು, ಜಿಲ್ಲಾಧಿಕಾರಿ ವೆಂಕಟೇಶ್ ಗುಣಮುಖರಾದವರಿಗೆ ಹೂ ನೀಡಿ ಆಸ್ಪತ್ರೆಯಿಂದ ಬಿಳ‍್ಕೊಟ್ಟರು.
ಮಂಡ್ಯ:ಇಂದು ಮತ್ತೆ ಕೊರೊನಾದಿಂದ 53 ಮಂದಿ ಗುಣಮುಖ - ಮಂಡ್ಯದಲ್ಲಿ ಕೊರೊನಾ ಪ್ರಕರಣಗಳು
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪೈಕಿ ಇಂದು 53 ಮಂದಿ ಗುಣಮುಖರಾಗಿದ್ದು, ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಹೂ ನೀಡಿ ಆಸ್ಪತ್ರೆಯಿಂದ ಬಿಳ‍್ಕೊಟ್ಟರು.
ಇಂದು ಮತ್ತೆ ಕೊರೊನಾದಿಂದ 53 ಮಂದಿ ಗುಣಮುಖ
ಗುಣಮುಖರಾದವರಲ್ಲಿ ಬಹುತೇಕರು ಮುಂಬೈ ಕನ್ನಡಿಗರಾಗಿದ್ದು, ಜಿಲ್ಲೆಯಲ್ಲಿ ನಿನ್ನೆಯಷ್ಟೇ 20 ಮಂದಿಯನ್ನು ಬಿಡುಗಡೆ ಮಾಡಲಾಗಿತ್ತು. ಈಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 168ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಒಟ್ಟು 302 ಪ್ರಕರಣಗಳಿದ್ದು, ಮಿಮ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗುಣಮುಖ ಹೊಂದಿದವರನ್ನು ಅಭಿನಂದಿಸಿದರು.