ಮಂಡ್ಯ: ಅಂಬಿ ಅಭಿಮಾನ ಅಂದರೆ ಹೀಗೆನೇ. ಅವರು ಎಲ್ಲೇ ಇರಲಿ ಹುಟ್ಟುಹಬ್ಬದ ದಿನದಂದು ಅಂಬಿ ಮರೆಯಲು ಸಾಧ್ಯವೇ ಇಲ್ಲ. ಅದರಲ್ಲೂ ಸುಮಲತಾ ಅಂಬರೀಶ್ ಗೆಲುವಿನ ನಂತರ ಸಂಭ್ರಮ ಜೋರಾಗಿಯೇ ಇದೆ.
ಮಂಡ್ಯ ಜನತೆಗೆ ಧಾರವಾಡ ಪೇಡ ಹಂಚಿದ ಅಂಬಿ ಅಭಿಮಾನಿ ದೂರದ ಬೆಳಗಾವಿಯ ಉದ್ಯಮಿಯೊಬ್ಬರು ಮಂಡ್ಯ ಜನರಿಗೆ ಧಾರವಾಡ ಪೇಡ ಹಂಚುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಳಗಾವಿಯ ಹೋಟೆಲ್ ಉದ್ಯಮಿ ನಾರಾಯಣ ಕಲಾಲ್ 5 ಕ್ವಿಂಟಾಲ್ ಧಾರವಾಡ ಪೇಡವನ್ನು ನಗರದಲ್ಲಿ ಹಂಚಿ ಸಂಭ್ರಮಿಸಿದ್ದಾರೆ.
ಸುಮಲತಾ ಅಂಬರೀಶ್ ಗೆಲುವಿನ ನೆನಪಿಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಮಾವೇಶ ಏರ್ಪಡಿಸಿದ್ದಾರೆ. ಹೀಗಾಗಿ ದೂರದ ಬೆಳಗಾವಿಯಿಂದ ನಾರಾಯಣ ಕಲಾಲ್ ಪೇಡವನ್ನು ತಂದು ಜನರಿಗೆ ಹಂಚಿ ಸಂಭ್ರಮಿಸಿದರು. ಈ ಟಿವಿ ಭಾರತ್ ಜೊತೆ ಮಾತನಾಡಿದ ಅವರು, ನಮ್ಮ ಕುಟುಂಬಕ್ಕೆ ಅಂಬಿ ಸಹಾಯ ದೊಡ್ಡದು. ಹೀಗಾಗಿ ನಾನು ಅವರ ಅಭಿಮಾನಿ, ಅಭಿಮಾನಿಯಾಗಿ ಸುಮಲತಾ ಅಂಬರೀಶ್ ಅವರ ಸಂಭ್ರಮದಲ್ಲಿ ನಾನೂ ಪಾಲ್ಗೊಂಡಿದ್ದೇನೆ ಎಂದರು.
ಸಂಭ್ರಮಕ್ಕಾಗಿ 5 ಕ್ವಿಂಟಾಲ್ ಧಾರವಾಡ ಪೇಡವನ್ನು ಮಂಡ್ಯಕ್ಕೆ ತರಲಾಗಿದೆ. ಪ್ರತಿಯೊಂದು ಪ್ಯಾಕ್ ಮೇಲೂ ಅಂಬಿ ಹಾಗೂ ಸುಮಲತಾರ ಹೆಸರು ಹಾಕಿಸಲಾಗಿದೆ. ಇನ್ನು ಪೇಡ ಜೊತೆಗೆ ಸ್ಥಳೀಯ ಅಭಿಮಾನಿಗಳು ಲಾಡು ಹಂಚಿ ಸಂಭ್ರಮಿಸಿದ್ದಾರೆ.