ಮಂಡ್ಯ :ಮಗು ಸೇರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮೃತರ ಹುಟ್ಟೂರು ಮಂಡ್ಯ ತಾಲೂಕಿನ ಹಲ್ಲೆಗೆರೆ ಶಂಕರ್ ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಶಂಕರ್ ಕುಟುಂಬ 25 ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ನೆಲೆಸಿದ್ದರು. ಆಗಾಗ ಗ್ರಾಮಕ್ಕೆ ಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಇತ್ತೀಚೆಗೆ ಶ್ರಾವಣದಲ್ಲಿ ಕುಟುಂಬ ಸಮೇತವಾಗಿ ಬಂದು ಯಲ್ಲಮ್ಮನ ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದರು ಎಂದು ಗ್ರಾಮದವರು ತಿಳಿಸಿದ್ದಾರೆ.
ಶಂಕರ್ ಹುಟ್ಟೂರು ಹಲ್ಲೆಗೆರೆ ಗ್ರಾಮದಲ್ಲಿ ನೀರವ ಮೌನ.. ಹಲ್ಲೆಗೆರೆ ಗ್ರಾಮದ ಚಿಕ್ಕ ದುರ್ಗೆಗೌಡ ಮತ್ತು ಅಮ್ಮಯಮ್ಮ ದಂಪತಿ ಹಿರಿಯ ಮಗ ಶಂಕರ್. ಇವರಿಗೆ ಒಬ್ಬ ಸಹೋದರ, ಐದು ಜನ ಸಹೋದರಿಯರಿದ್ದಾರೆ. ಹಲವು ವರ್ಷಗಳ ಹಿಂದೆಯೇ ಬದುಕು ಕಟ್ಟಿಕೊಳ್ಳಲು ಶಂಕರ್ ಮಂಡ್ಯದಿಂದ ಬೆಂಗಳೂರಿಗೆ ಹೋಗಿದ್ದರು. ಸದ್ಯ ಹಲ್ಲೆಗೆರೆಯಲ್ಲಿ ಶಂಕರ್, ಓರ್ವ ಸಹೋದರಿ ಪಾರ್ವತಮ್ಮ ಇದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಸವದತ್ತಿಯ ಯಲ್ಲಮ್ಮ ದೇವಿ ಶಂಕರ್ ಮನೆ ದೇವರು. ಹಾಗಾಗಿ, ಗ್ರಾಮಸ್ಥರ ನೆರವಿನಿಂದ ಶಂಕರ್, ಶ್ರೀ ಯಲ್ಲಮ್ಮ ದೇವಿ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿ ಬಾರಿ ಸವದತ್ತಿಗೆ ಹೋಗಲು ಆಗಲ್ಲ ಎಂದು 2002ರಲ್ಲೇ ಗ್ರಾಮದಲ್ಲೇ ದೇವಾಲಯವನ್ನು ನಿರ್ಮಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: 5 ದಿನದಿಂದ ಶವಗಳ ಮಧ್ಯೆಯೇ ಅನ್ನ-ನೀರಿಲ್ಲದೆ ಬದುಕಿದ ಕಂದಮ್ಮ