ಕರ್ನಾಟಕ

karnataka

ETV Bharat / state

ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ: ದಂಪತಿ ಸೇರಿ ಐವರು ದುರ್ಮರಣ

ಇನ್ನೋವಾ ಮತ್ತು ಸ್ವಿಫ್ಟ್ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಐವರು ದುರ್ಮರಣ. ನಾಗಮಂಗಲ ತಾಲೂಕಿನಲ್ಲಿ ತಡರಾತ್ರಿ ಸಂಭವಿಸಿದ ಅಪಘಾತ.

ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ
ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ

By

Published : Dec 12, 2022, 10:45 AM IST

ಮಂಡ್ಯ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಐವರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಕಡೆಯಿಂದ ಆಗಮಿಸುತ್ತಿದ್ದ ಸ್ವಿಫ್ಟ್​ ಕಾರು ಮತ್ತು ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿನ ಮಧ್ಯೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಇನ್ನೋವಾದಲ್ಲಿದ್ದ ದಂಪತಿ ಕೃಷ್ಣಮೂರ್ತಿ (66), ಜಯಂತಿ(60) ಹಾಗೂ ಚಾಲಕ ಪ್ರಭಾಕರ್ ಮೃತಪಟ್ಟಿದ್ದಾರೆ. ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ನಾಗಮಂಗಲ ಬಳಿ ಕಾರುಗಳ ನಡುವೆ ಭೀಕರ ಅಪಘಾತ

ಸ್ಥಳಕ್ಕೆ ಸಿಪಿಐ ಸುಧಾಕರ್ ಹಾಗೂ ಬಿಂಡಿಗನವಿಲೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಗಾಯಾಳುಗಳನ್ನು ಬಿಜಿಎಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಓದಿ: ತಿಂಗಳಿಗೊಂದು ಬಲಿ ಪಡೆಯುತ್ತಿದ್ದ ಕಾಡಾನೆ ಭೈರ ಕೊನೆಗೂ ಸೆರೆ.. ಮೂಡಿಗೆರೆ ಜನ ನಿರಾಳ )

ABOUT THE AUTHOR

...view details