ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ ನಿಜ. ಆದರೆ ಜನರಿಗೆ ತುಸು ನೆಮ್ಮದಿಯ ವಿಚಾರವೊಂದಿದೆ. ಇದುವರೆಗೂ ಸಕ್ಕರೆ ಜಿಲ್ಲೆಯಲ್ಲಿ 433 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಮಂಡ್ಯದಲ್ಲಿ ಗುಣಮುಖ ಪ್ರಮಾಣದಲ್ಲಿ ಹೆಚ್ಚಳ: ಜನರು ತುಸು ನಿರಾಳ - ಮಂಡ್ಯದಲ್ಲಿ ಸೋಂಕುಮುಕ್ತರ ಸಂಖ್ಯೆಯಲ್ಲಿ ಹೆಚ್ಚ
ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮಂಡ್ಯದ ಜನರು ಸ್ವಲ್ಪ ನಿರಾಳರಾಗಿದ್ದಾರೆ.
ಮಂಡ್ಯ
ನಗರದ ಮಿಮ್ಸ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 661 ಪ್ರಕರಣಗಳು ದಾಖಲಾಗಿವೆ. ಇಂದು 31 ಪ್ರಕರಣ ದಾಖಲಾಗಿವೆ. ಸದ್ಯ 189 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜನ ಸ್ವಲ್ಪ ನಿರಾಳರಾಗಿದ್ದಾರೆ.
ಇದುವರೆಗೆ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಎಲ್ಲಾ ಸೋಂಕಿತರಿಗೂ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.