ಕರ್ನಾಟಕ

karnataka

ಸಕ್ಕರೆ ನಾಡಿನಲ್ಲಿ ಕೊರೊನಾ ಅಬ್ಬರ: ಜಿಲ್ಲಾಡಳಿತಕ್ಕೆ ಶುರುವಾಗಿದೆ ಆತಂಕ

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತವನ್ನು ಚಿಂತೆಗೀಡು ಮಾಡಿದೆ.

By

Published : Apr 21, 2021, 7:41 AM IST

Published : Apr 21, 2021, 7:41 AM IST

413 new corona cases found, 413 new corona cases found in Mandya, Mandya corona report, 413 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಮಂಡ್ಯದಲ್ಲಿ 413 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಮಂಡ್ಯ ಕೊರೊನಾ ವರದಿ,
413 ಹೊಸ ಪ್ರಕರಣಗಳ ದಾಖಲು

ಮಂಡ್ಯ: ಜಿಲ್ಲೆಯಲ್ಲಿ 413 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 22,675 ಕ್ಕೆ ಏರಿಕೆಯಾಗಿದೆ.

113 ಮಂದಿ ಗುಣಮುಖರಾಗಿದ್ದು, ಈವರೆಗೆ 20,764 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 168 ಜನ ಕೊರೊನಾಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸೋಂಕು ಪ್ರಕರಣಗಳು ಎಲ್ಲೆಲ್ಲಿ?

ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ಪ್ರಕಾರ, ಮಂಡ್ಯ 169, ಮದ್ದೂರು 28, ಮಳವಳ್ಳಿ 25, ಪಾಂಡವಪುರ 62, ಶ್ರೀರಂಗಪಟ್ಟಣ 37, ಕೆ‌.ಆರ್.ಪೇಟೆ 35, ನಾಗಮಂಗಲ 45, ಹೊರ ಜಿಲ್ಲೆಯ 12 ಕೊರೊನಾ ಪ್ರಕರಣಗಳು ದಾಖಲಾಗಿವೆ.

113 ಮಂದಿ ಗುಣಮುಖ ಡಿಸ್ಚಾರ್ಜ್

ಮಂಡ್ಯ 39, ಮದ್ದೂರು 18, ಮಳವಳ್ಳಿ 5, ಪಾಂಡವಪುರ 22, ಶ್ರೀರಂಗಪಟ್ಟಣ 18, ಕೆ.ಆರ್.ಪೇಟೆ 5, ನಾಗಮಂಗಲ 6 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ABOUT THE AUTHOR

...view details