ಕರ್ನಾಟಕ

karnataka

ETV Bharat / state

ಮಂಡ್ಯದ 313 ಹಳ್ಳಿಗಳಿಗೆ ಕಾಲಿಡದ ಕೊರೊನಾ...​! - ಮಂಡ್ಯ ಕೋವಿಡ್​ ಸುದ್ದಿ

ಮಂಡ್ಯ ಜಿಲ್ಲೆಯ 313 ಹಳ್ಳಿಗಳು ಕೊರೊನಾ 2ನೇ ಅಲೆಯಿಂದ ಮುಕ್ತವಾಗಿರುವುದು ಮಂಡ್ಯ ಜಿಲ್ಲಾ ಪಂಚಾಯಿತಿಯ ಮಾಹಿತಿ ಖಚಿತಪಡಿಸಿದೆ. ಸೋಂಕು ತಗುಲಿ ಗುಣಮುಖರಾಗಿರುವ ಮಾಹಿತಿಯ ಪ್ರಕಾರ ಜಿಲ್ಲೆಯ 990 ಹಳ್ಳಿಗಳಲ್ಲಿ ಈಗಲೂ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.

mandya
ಮಂಡ್ಯ

By

Published : Jun 25, 2021, 3:04 PM IST

Updated : Jun 25, 2021, 3:26 PM IST

ಮಂಡ್ಯ: ದೇಶವೇ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮಂಡ್ಯದ 313 ಹಳ್ಳಿಗಳು ಮಾತ್ರ ಸೇಫ್​ ಆಗಿದೆ. ಅಷ್ಟೇ ಅಲ್ಲದೆ, ಈಗಾಗಲೇ ಕೋವಿಡ್​ ತಗುಲಿ ಸೋಂಕಿನಿಂದ ಗುಣಮುಖರಾಗಿ ಸದ್ಯ 990 ಹಳ್ಳಿಗಳು ಶೂನ್ಯ ಪ್ರಕರಣ ದಾಖಲಿಸಿದೆ. ಕೋವಿಡ್ ಮೊದಲ ಅಲೆಗಿಂತ 2ನೇ ಅಲೆ ಜನರನ್ನು ತಲ್ಲಣಗೊಳಿಸಿದೆ. ಕೊರೊನಾ ಇಲ್ಲದ ಸ್ಥಳವೇ ಇಲ್ಲವೇನೋ ಎಂಬಂತೆ ಭಾಸವಾಗಿತ್ತು. ಆದರೆ ಈ ಹಳ್ಳಿಗಳಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

ಜಿಲ್ಲೆಯ 313 ಹಳ್ಳಿಗಳು ಕೊರೊನಾ 2ನೇ ಅಲೆಯಿಂದ ಮುಕ್ತವಾಗಿರುವುದು ಮಂಡ್ಯ ಜಿಲ್ಲಾ ಪಂಚಾಯಿತಿಯ ಮಾಹಿತಿ ಖಚಿತಪಡಿಸಿದೆ. ಸೋಂಕು ತಗುಲಿ ಗುಣಮುಖರಾಗಿರುವ ಮಾಹಿತಿಯ ಪ್ರಕಾರ ಜಿಲ್ಲೆಯ 990 ಹಳ್ಳಿಗಳಲ್ಲಿ ಈಗಲೂ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.

ಮಂಡ್ಯ ಜಿಲ್ಲೆಯ 313 ಹಳ್ಳಿಗಲ್ಲಿ ಪತ್ತೆಯಾಗದ ಸೋಂಕು

ಜಿ.ಪಂ. ಮಾಹಿತಿಯಂತೆ ಜಿಲ್ಲೆಯಲ್ಲಿ ಬೇಚರಕ್ ಗ್ರಾಮಗಳು ಹಾಗೂ 1864 ಹಳ್ಳಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿವೆ. ಈ ಪೈಕಿ 313 ಹಳಿಗಳಲ್ಲಿ ಈವರೆಗೆ 2ನೇ ಅಲೆಯ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಲಕ್ಷಣಗಳೂ ಜನರನ್ನು ಬಾಧಿಸಿಲ್ಲ. ಯಾವುದೇ ಭಯ, ಆತಂಕವಿಲ್ಲದೆ ಈ ಗ್ರಾಮಗಳ ಜನರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಗ್ರಾಮಸ್ಥರೇ ಮುನ್ನೆಚ್ಚರಿಕ ವಹಿಸುವುದರೊಂದಿಗೆ ಹೊರಗಿನಿಂದ ಬರುವವರಿಗೆ ನಿಷೇಧ ವಿಧಿಸಿಕೊಂಡಿದ್ದು, ಈ ಹಳ್ಳಿಗಳು ಸೋಂಕಿನಿಂದ ಮುಕ್ತವಾಗಲು ಕಾರಣವೆನ್ನಲಾಗಿದೆ.

ಸೋಂಕಿನಿಂದ ಮುಕ್ತವಾಗಲು ಕಾರಣ:ಈ ಊರಿನವರಿಗೆ ಕೊರೊನಾ ಭಯ ಎಂದಿಗೂ ಕಾಡಿಲ್ಲ. ಸೋಂಕು ಮುಕ್ತ ಗ್ರಾಮಗಳ ಜನರು ನಗರ, ಪಟ್ಟಣ ಸಂಪರ್ಕದಿಂದ ಅಂತರ ಕಾಯ್ದುಕೊಂಡಿದ್ದರು. ಹೊರಗಿನವರ ಸಂಪರ್ಕವೂ ಕಡಿಮೆಯಿತ್ತು. ಊರಿನವರು ಸ್ವಯಂಪ್ರೇರಿತರಾಗಿ ಹೊರಗೆ ಹೋಗದೆ ಗ್ರಾಮದೊಳಗೆ ಉಳಿದುಕೊಂಡು ಸೋಂಕು ವ್ಯಾಪಿಸುವುದು ತಪ್ಪಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ವಿಷಯ.

Last Updated : Jun 25, 2021, 3:26 PM IST

ABOUT THE AUTHOR

...view details