ಮಂಡ್ಯ: ಸಕ್ಕರೆ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಮುಂಬೈ ಸೋಂಕು ಜಿಲ್ಲೆಯಲ್ಲಿ ದಾಖಲೆ ಬರೆದಿದೆ. ಇಂದು ಜಿಲ್ಲೆಯಲ್ಲಿ 28 ಹೊಸ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಪ್ರಕರಣಗಳ ಸಂಖ್ಯೆ 237 ಕ್ಕೇರಿದೆ.
ಒಂದೇ ದಿನ 28 ಪ್ರಕರಣ ದಾಖಲು: ಸಕ್ಕರೆ ಜಿಲ್ಲೆಯಲ್ಲಿ ಮುಂದುವರಿದ ಕಹಿ ಘಟನೆ - Increasing corona case
ಕರ್ನಾಟಕದಲ್ಲಿ ಕೊರೊನಾ ವೈರಸ್ ರುದ್ರನರ್ತನ ಮುಂದುವರೆದಿದೆ. ಇನ್ನು ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಸಾಧಾರಣ ಹಂತದಲ್ಲಿದ್ದ ಸೋಂಕಿತರ ಸಂಖ್ಯೆ ಇಂದು ಭಾರೀ ಬದಲಾವಣೆಗೆ ಬಂದು ನಿಂತಿದೆ.
ಸಂಗ್ರಹ ಚಿತ್ರ
ಕಳೆದ 15 ದಿನಗಳ ಹಿಂದೆ ಕೇವಲ 25 - 30 ಪ್ರಕರಣಗಳಿದ್ದ ಜಿಲ್ಲೆಯಲ್ಲಿ ವಲಸಿಗರು ಹೆಚ್ಚಾಗುತ್ತಿದ್ದಂತೆ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ (237) ದಾಟಿದೆ. ಈ ಸೋಂಕಿತರೆಲ್ಲರೂ ಮುಂಬೈ ವಲಸಿಗರಾಗಿದ್ದಾರೆ. ಹೆಚ್ಚಿನದಾಗಿ ಕೆ.ಆರ್.ಪೇಟೆ ತಾಲೂಕಿನವರಾಗಿದ್ದು, ಒಂದೇ ತಾಲೂಕಿನಿಂದಲೇ 150 ಮಂದಿ ಸೋಂಕಿತರಿದ್ದಾರೆ.