ಮಂಡ್ಯ:ಜಿಲ್ಲೆಗೆ ಮುಂಬೈ ಸೋಂಕು ತಲೆನೋವಾಗಿ ಪರಿಣಮಿಸಿದೆ. ಇಂದು ಮಧ್ಯಾಹ್ನದ ವರದಿಯಲ್ಲಿ 22 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.
ಮಂಡ್ಯಕ್ಕೆ ಮುಳುವಾದ ಮುಂಬೈ ಮೂಲ... ಇಂದು 22 ಮಂದಿಗೆ ಸೋಂಕು! - total corona cases from mandya
ಮಂಡ್ಯ ಜಿಲ್ಲೆಯಲ್ಲಿ ಇಂದು ಹೊಸದಾಗಿ 22 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರೆಲ್ಲರೂ ಮುಂಬೈನಿಂದ ಬಂದವರೇ ಆಗಿದ್ದಾರೆ.
22 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಈವರೆಗೆ ಒಟ್ಟು 72 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಇಂದು ಒಂದೇ ದಿನ ಕೆ.ಆರ್. ಪೇಟೆ ತಾಲೂಕಿನ 18 ಮಂದಿ ಹಾಗೂ ನಾಗಮಂಗಲ ತಾಲೂಕಿನ 4 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.
ಸೋಂಕಿತರಲ್ಲಿ 8 ಮಂದಿ ಪುರುಷರು, 9 ಮಂದಿ ಮಹಿಳೆಯರು ಹಾಗೂ ಐವರು ಮಕ್ಕಳಿದ್ದಾರೆ. ಇವರಲ್ಲಿ 60 ವರ್ಷ ಮೇಲ್ಪಟ್ಟವರು ಮೂರು ಮಂದಿ ಇದ್ದಾರೆ. ಎಲ್ಲರಿಗೂ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈ ಮೂಲವೇ ಈಗ ಜಿಲ್ಲೆಗೆ ಕಂಟಕವಾಗುತ್ತಿದೆ.