ಮಂಡ್ಯ:ಹಾಲಿಗೆ ನೀರು ಬೆರಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತುಗೊಳಿಸಿ ಮನ್‍ಮುಲ್ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಮನ್‍ಮುಲ್‍ನಲ್ಲಿ ಮೊದಲ ಹಂತದಲ್ಲಿ ನಾಲ್ವರು ಅಧಿಕಾರಿಗಳು, ಎರಡನೇ ಹಂತದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತಿಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಕಲಬೆರಕೆ ಹಾಲು ಹಗರಣ: ಮತ್ತಿಬ್ಬರು ಅಧಿಕಾರಿಗಳು ಅಮಾನತು - ಮಂಡ್ಯ ಲೇಟೆಸ್ಟ್ ನ್ಯೂಸ್
ಹಾಲಿಗೆ ನೀರು ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಹಾಗೂ ಮನ್‍ಮುಲ್‍ನ ಉಪ ವ್ಯವಸ್ಥಾಪಕಿ ಶೈಲಜಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
![ಕಲಬೆರಕೆ ಹಾಲು ಹಗರಣ: ಮತ್ತಿಬ್ಬರು ಅಧಿಕಾರಿಗಳು ಅಮಾನತು 2 more suspended in water mixed milk case](https://etvbharatimages.akamaized.net/etvbharat/prod-images/768-512-12093151-thumbnail-3x2-cxgvdthjg.jpg)
ಕರ್ನಾಟಕ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಹಾಗೂ ಮನ್‍ಮುಲ್‍ನ ಉಪ ವ್ಯವಸ್ಥಾಪಕಿ ಶೈಲಜಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಮೂಲಕ ಅಮಾನತುಗೊಂಡ ಅಧಿಕಾರಿಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಅವರು ಮನ್ಮುಲ್ಗೆ ಟ್ಯಾಂಕರ್ಗಳ ಮೂಲಕ ಬರುತ್ತಿದ್ದ ಹಾಲಿನ ಗುಣಮಟ್ಟವನ್ನು ಪರಿಶೀಲನೆ ಮಾಡದ ಕಾರಣ ಕೆಎಂಎಫ್ ಎಂಡಿ ಸತೀಶ್ ಅಮಾನತು ಮಾಡಿದ್ದಾರೆ. ಮನ್‍ಮುಲ್‍ನ ಸಂಸ್ಕರಣಾ ವಿಭಾಗದ ಶೈಲಜಾ ಕರ್ತವ್ಯ ಲೋಪವೆಸಗಿದ ಕಾರಣ ಅವರು ಕೂಡ ಅಮಾನತಿಗೆ ಒಳಗಾಗಿದ್ದು, ಇಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಹಾಲಿಗೆ ನೀರು ಬೆರೆಸಿದ ಆರೋಪಿಗಳನ್ನೇಕೆ ಬಂಧಿಸಿಲ್ಲ? .. ಸಚಿವ ಸೋಮಶೇಖರ್ ಗರಂ