ಕರ್ನಾಟಕ

karnataka

ETV Bharat / state

ಲೋಕ ಸಮರ: ಜಿಲ್ಲಾ ವ್ಯಾಪ್ತಿಯಲ್ಲಿ 16 ರೌಡಿಗಳ ಗಡಿಪಾರು - undefined

ಜೆಡಿಎಸ್ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ದೂರು ನೀಡಲಾಗಿದೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

16 ರೌಡಿಗಳ ಗಡಿಪಾರು

By

Published : Apr 8, 2019, 11:48 PM IST

ಮಂಡ್ಯ: ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ದೂರು ನೀಡಲಾಗಿದೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

ಕಾರ್ತಿಕ್ ಹಾಗೂ ಶಿವಣ್ಣ ಮೇಲೆ ಹಲ್ಲೆ ನಡೆದಿತ್ತು. ಕಾರ್ತಿಕ್ ಬೈಕ್ ಮೇಲೆ ಹೋಗುತ್ತಿದ್ದಾಗ ಶಿವಣ್ಣ, ರವಿ, ಬಸವರಾಜು ಮತ್ತು ನಾಗರಾಜು ಜೊತೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ. ಪ್ರಚಾರದ ವೇಳೆ ಹಲ್ಲೆ ನಡೆದಿಲ್ಲ. ರಾತ್ರಿ ವೇಳೆ ಪ್ರಕರಣ ನಡೆದಿದ್ದು, ತನಿಖೆ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂಬುದನ್ನು ತಿಳಿಸಲಾಗುವುದು ಎಂದರು.

ರೌಡಿಗಳ ಗಡಿಪಾರು:

16 ರೌಡಿಗಳ ಗಡಿಪಾರು
ಚುನಾವಣೆ ಬಂದೋಬಸ್ತ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 16 ರೌಡಿಗಳನ್ನು ಗಡಿಪಾರು ಮಾಡಲಾಗಿದ್ದು, ಮತ್ತಷ್ಟು ರೌಡಿಗಳನ್ನು ಗಡಿಪಾರು ಮಾಡಲಾಗುವುದು ಎಂದ ಅವರು, ಮಂಡ್ಯ ಸೆಂಟ್ರಲ್ ಠಾಣೆ ವ್ಯಾಪ್ತಿಯಲ್ಲಿ ಸೂರ್ಯ ಹಾಗೂ ಪ್ರಮೋದ್ ಎಂಬವರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಂಡ್ಯ ಪೂರ್ವ ಠಾಣೆಯಿಂದ ಕುಮಾರ್, ಪಶ್ಚಿಮ ಠಾಣೆ ವ್ಯಾಪ್ತಿಯಿಂದ ಡಾನ್ ಕುಮಾರ್ ಎಂಬುವರನ್ನು ಗಡಿಪಾರು ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಕೆ.ಕೆ. ಪಣೀಶ, ಸೈಯದ್, ಕಿರಣ, ವೆಂಕಟೇಶ್, ವಿಜಯ್, ಗಣೇಶ್, ಕಾರ್ತಿಕ್ ರನ್ನು ಗಡಿಪಾರು ಮಾಡಲಾಗಿದೆ. ಮಳವಳ್ಳಿ ಗ್ರಾಮಾಂತರದಿಂದ ಮರಿಲಿಂಗೇಗೌಡ, ಮದ್ದೂರು ಠಾಣೆ ವ್ಯಾಪ್ತಿಯಲ್ಲಿ ವಿರೇಶ್, ವರುಣ್, ಸೂರಜ್ ಗೌಡ, ಪ್ರಶಾಂತ ಎಂಬ ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details