ಮಂಡ್ಯ:ಬೀದಿನಾಯಿಗಳ ದಾಳಿಗೆ 12 ಕುರಿಗಳು ಬಲಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಅಮ್ಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಶಿವಸ್ವಾಮಿ ಎಂಬುವರಿಗೆ ಸೇರಿದ ಕುರಿಗಳಾಗಿದ್ದು, ಮನೆಯ ಮುಂದೆ ಇದ್ದ ಕುರಿ ಮಂದೆಗೆ ಏಕಾಏಕಿ ನಾಲ್ಕೈದು ಬೀದಿ ನಾಯಿಗಳು ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿದ್ದವು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 12 ಕುರಿಗಳು ಸಾವನ್ನಪ್ಪಿವೆ ಎಂದು ಕುರಿ ಮಾಲೀಕ ಶಿವಸ್ವಾಮಿ ತಿಳಿಸಿದ್ದಾರೆ.