ಮಂಡ್ಯ:ಕಾಚಳ್ಳಿ ಹಣ್ಣು ಸೇವಿಸಿ 12 ಮಂದಿ ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ನಡೆದಿದೆ. ಉತ್ತರಪ್ರದೇಶದಿಂದ ಆಲೆಮನೆ ಕೆಲಸಕ್ಕೆಂದು ಬಂದಿರುವ ಕಾರ್ಮಿಕರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶದ ಕಾರ್ಮಿಕರಾದ ಅನಂತ್ (16), ಸದ್ಧಾಂ(26), ನಾಜೀಂ(17), ವಸೀಮ್(32), ಶಾಕೀಂ(22), ಬಿ.ಹೊಸೂರು ಗ್ರಾಮದ ಜಗದೀಶ್ (40), ಇವರ ಪುತ್ರ ತೇಜು(7) ಹಾಗೂ ಅಕ್ಕಪಕ್ಕದ ಮನೆಗಳ ಮಕ್ಕಳಾದ ಚೈತ್ರಾ (8), ಕವನ(11), ಅಭಿಷೇಕ್(6), ದೀಕ್ಷಾ(5), ನಿತಿನ್(8) ಅಸ್ವಸ್ಥರಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.