ಮಂಡ್ಯ :ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸಿದೆ. ಜಿಲ್ಲೆಯಲ್ಲಿ ಒಂದೇ ದಿನ 12 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿಂದು 1,133 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 43,572ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1,345 ಮಂದಿ ಚೇತರಿಕೆಯಾಗಿದ್ದು, ಒಟ್ಟು ಈವರೆಗೆ 35,162 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 8,122 ಕ್ಕೆ ಏರಿಕೆ ಕಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 286 ಮಂದಿ ಬಲಿಯಾಗಿದ್ದಾರೆ.
ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ..
ನಗರದ ಮಿಮ್ಸ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಡಿಹೆಚ್‌ಒ ಡಾ.ಹೆಚ್.ಪಿ.ಮಂಚೇಗೌಡ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸೆಷನ್ ಮೂಲಕ ಮಿಮ್ಸ್ ಹಾಗೂ 6 ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ.
18 ವರ್ಷದ ದಾಟಿದ 44 ವರ್ಷದೊಳಗಿನ 8,33,267 ಮಂದಿ ಜಿಲ್ಲೆಯಲ್ಲಿದ್ದು, ಅವರಿಗೆ ಲಸಿಕೆ ನೀಡಲು 7,500 ಡೋಸೆಜ್ ಬಂದಿದೆ. ಇದನ್ನು ತಾಲೂಕು ಆಸ್ಪತ್ರೆಗೆ, ಮಿಮ್ಸ್‌ಗೆ ಹಂಚಿಕೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ನೀಡಲಾಗುವುದು ಎಂದು ಹೇಳಿದರು.
45 ವರ್ಷ ಮೇಲ್ಪಟ್ಟವರಿಗೆ ನೀಡಲು 12,000 ಸಾವಿರ ಲಸಿಕೆಗಳು ಬಂದಿದೆ. ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯಲು ಕಾಯುತ್ತಿರುವವರಿಗೆ ನೀಡಲು ಆದ್ಯತೆ ಮೇಲೆ ಕೊಡಲಾಗುವುದು ಎಂದು ಹೇಳಿದರು.