ಗಂಗಾವತಿ :ಇಲ್ಲಿನ ತಾಲೂಕು ಪಂಚಾಯತ್ ಆವರಣದಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಶಾಖಾ ಗ್ರಂಥಾಲಯಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹಾಗೂ ತಾಪಂ ಅಧ್ಯಕ್ಷ ಮೊಹ್ಮದ್ ರಫಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಗ್ರಂಥಾಲಯಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ - ಗಂಗಾವತಿ ಗ್ರಂಥಾಲಯ ಸಮಸ್ಯೆ
ಓದುವ ಕೊಠಡಿಯಲ್ಲಿ ಹೆಚ್ಚು ಜಾಗದ ಸಮಸ್ಯೆಯಿಂದ ಓದುಗರಿಗೆ ಉಂಟಾಗುತ್ತಿರುವ ಅನಾನುಕೂಲದ ಬಗ್ಗೆ ತಾಪಂ ಅಧ್ಯಕ್ಷ ರಫಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತರಲಾಯ್ತು..
ಗ್ರಂಥಾಲಯಕ್ಕೆ ಭೇಟಿ
ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿನ ಓದುವ ಕೊಠಡಿಯಲ್ಲಿ ಹೆಚ್ಚು ಜಾಗದ ಸಮಸ್ಯೆಯಿಂದ ಓದುಗರಿಗೆ ಉಂಟಾಗುತ್ತಿರುವ ಅನಾನುಕೂಲದ ಬಗ್ಗೆ ತಾಪಂ ಅಧ್ಯಕ್ಷ ರಫಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತರಲಾಯ್ತು. ಹಾಗೂ ಓದುಗರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಯ್ತು.
ಕಟ್ಟಡದ ಮೇಲ್ಮಹಡಿಯಲ್ಲಿ ಸ್ಥಳವಿದ್ದು, ಅನುದಾನ ಒದಗಿಸಿದ್ರೆ ಆಧುನಿಕ ತಂತ್ರಜ್ಞಾನ ಆಧರಿತ ಒಂದು ಸುಸಜ್ಜಿತ ಕೊಠಡಿ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ಇದಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಒಪ್ಪಿಗೆ ಸೂಚಿಸಿ ಆದಷ್ಟು ತ್ವರಿತವಾಗಿ ಯೋಜನೆ ರೂಪಿಸುವುದಾಗಿ ಹೇಳಿದರು.