ಗಂಗಾವತಿ(ಕೊಪ್ಪಳ):ನಟ ಪುನೀತ್ ರಾಜ್ಕುಮಾರ್ ಅವರ ನೆಚ್ಚಿನ ದೈವ ತಾಣವಾಗಿರುವ ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಭೇಟಿ ನೀಡಿ, ದೇವರ ದರ್ಶನ ಪಡೆದರು. ಯುವರಾಜ್ ನಟನೆಯ ಮೊದಲ ಚಿತ್ರ 'ಯುವ ರಣಧೀರ ಕಂಠೀರವ' ಚಿತ್ರ ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಚಿಕ್ಕಪ್ಪನ ನೆಚ್ಚಿನ ದೈವ ತಾಣಕ್ಕೆ 'ರಾಜ್' ಕುಟುಂಬದ ಕುಡಿ ಭೇಟಿ - Anjanadri hill Koppal
ಅಂಜನಾದ್ರಿ ಬೆಟ್ಟಕ್ಕೆ ಪುನೀತ್ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಅಂಜನಾದ್ರಿ ಬೆಟ್ಟಕ್ಕೆ ಯುವರಾಜ್ ಕುಮಾರ್ ಭೇಟಿ
ಹೊಸಪೇಟೆಯ ಆಟೋ ಚಾಲಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯುವರಾಜ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಂಜನಾದ್ರಿಗೆ ಭೇಟಿ ನೀಡಿದರು. ಕೊಪ್ಪಳ ಜಿಲ್ಲೆಯ ಸುತ್ತಲೂ ಪ್ರವಾಸ ಅಥವಾ ಸಿನಿಮಾ ಶೂಟಿಂಗ್ಗಾಗಿ ಬಂದರೆ ಅಪ್ಪು ತಪ್ಪದೇ ಅಂಜನಾದ್ರಿಗೆ ಭೇಟಿ ನೀಡುತ್ತಿದ್ದರು.
ಇದನ್ನೂ ಓದಿ:ಅಣ್ಣಾವ್ರ ಹುಟ್ಟುಹಬ್ಬದಂದು ಮೊಮ್ಮಗನ ಸಿನಿಮಾ ಫಸ್ಟ್ಲುಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್