ಗಂಗಾವತಿ (ಕೊಪ್ಪಳ):ಕ್ಷುಲ್ಲಕ ಕಾರಣಕ್ಕೆ ಗುಂಡಮ್ಮ ಕ್ಯಾಂಪಿನ ನಿವಾಸಿ ದೇವರಾಜ ಎಂಬ ಯುವಕನ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿ ಚಾಕು ಇರಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಇಬ್ಬರು ಯುವಕರು ಗಾಯಗೊಂಡಿದ್ದಾರೆ.
ಕೊಪ್ಪಳ: 24 ಗಂಟೆಯಲ್ಲಿ ಎರಡನೇ ಚಾಕು ಇರಿತ ಪ್ರಕರಣ - ಇಬ್ಬರಿಗೆ ಗಾಯ! - koppala knife stab case
ಮತ್ತೊಂದು ಚಾಕು ಇರಿತ ಪ್ರಕರಣದಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ.
ಕೊಪ್ಪಳ ಚಾಕು ಇರಿತ ಪ್ರಕರಣ
ಕಾಲೇಜು ವಿಚಾರಕ್ಕೆ ಎರಡು ಬಣಗಳ ಮಧ್ಯೆ ಜಗಳ ನಡೆದಿದ್ದು, ಅದು ಚಾಕು ಇರಿತಕ್ಕೆ ತಿರುಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸಚಿನ್ ಬಾಲಪ್ಪ ಹಾಗೂ ರಮೇಶ ಪಾಮಪ್ಪ ಎಂದು ಗುರುತಿಸಲಾಗಿದೆ. ಗಾಯಳಾಗುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿವೆ.
ಇದನ್ನೂ ಓದಿ:ಆನ್‌ಲೈನ್ ಗೇಮ್: 11 ಕೋಟಿ ಗೆದ್ದವನನ್ನು 1 ಕೋಟಿಗೆ ಅಪಹರಿಸಿದ್ದ 7 ಮಂದಿ ಸ್ನೇಹಿತರು ಅರೆಸ್ಟ್