ಗಂಗಾವತಿ: ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.
ಕಾರಣವಿಲ್ಲದೆ ಆಟೋಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಯುವಕರ ಗುಂಪು - ರಮೇಶ ನಾಯಕ
ಆಟೋ ಚಾಲಕನ ಮೇಲೆ ಯುವಕರ ಗುಂಪೊಂದು ದಿಢೀರ್ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗಂಗಾವತಿ ತಾಲ್ಲೂಕಿನ ದಾಸನಾಳದಲ್ಲಿ ಬುಧವಾರ ಸಂಜೆ ನಡೆದಿದೆ.
ಆಟೋ ಚಾಲಕನ ಮೇಲೆ ದಿಢೀರ್ ಎರಗಿ ಬಂತು ಯುವಕರ ಗುಂಪು
ಗಾಯಾಳುವನ್ನು ಹಿರೇಬೆಣಕಲ್ ಗ್ರಾಮದ ಆಟೋ ಚಾಲಕ ಲಿಂಗರಾಜ ಪಾಂಡುರಂಗ ಎಂದು ಗುರುತಿಸಲಾಗಿದೆ. ಗಾಯಾಳುವನ್ನ ಸ್ಥಳೀಯರು ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದು, ಘಟನೆಗೆ ಏನು ಕಾರಣ ಎಂಬ ಖಚಿತ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ.
ನಾಲ್ಕು ದ್ವಿಚಕ್ರ ವಾಹನದಲ್ಲಿ ತಲಾ ಮೂರು ಜನರಂತೆ ಬಂದು ತನ್ನ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಸಿದ್ಧಿಕೇರಿ ಗ್ರಾಮದ ರಮೇಶ ನಾಯಕ ಎಂದಷ್ಟೆ ಗುರುತಿಸಬಲ್ಲೆ ಎಂದು ಗಾಯಾಳು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.