ಕರ್ನಾಟಕ

karnataka

ETV Bharat / state

ಯುವಕರು ಮದ್ಯದಿಂದ ಸಂಪೂರ್ಣ ದೂರವಿರಿ: ಶಾಸಕ ಅಮರೇಗೌಡ ಪಾಟೀಲ ಸಲಹೆ - MLA Amaregowda Patil bayyapur

ತಾಲೂಕಿನ ಬೋದೂರು ತಾಂಡದಲ್ಲಿ ಬಂಜಾರ ಕುಲಗುರು, ಶ್ರೀ ಸೇವಾಲಾಲ ಮಹಾರಾಜರ 282ನೇ ಜಯಂತ್ಯುತ್ಸವ, ತುಲಾಭಾರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಂಡಗಳಲ್ಲಿ ಮದ್ಯ ಸಾಮಾನ್ಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸುಧಾರಣೆ ಕಂಡು ಕಡಿಮೆಯಾಗುತ್ತಿದೆ. ಮದ್ಯ ಸಂಪೂರ್ಣ ನಿಷೇಧ ಆಗಬೇಕಿದೆ ಎಂದರು.

ಶಾಸಕ ಅಮರೇಗೌಡ ಪಾಟೀಲ
ಶಾಸಕ ಅಮರೇಗೌಡ ಪಾಟೀಲ

By

Published : Feb 7, 2021, 4:25 AM IST

ಕುಷ್ಟಗಿ(ಕೊಪ್ಪಳ): ಮದ್ಯ ಕುಡಿಯುವುದರಿಂದ ಶಕ್ತಿ ಬರುತ್ತೇನು? ಅದೇನ್ ತಾಕತ್ ಕೀ ದವಾ ಏನು?.. ಮನುಷ್ಯನ ಕರಳು, ಲಿವರ್ ಹಾಳು ಮಾಡುವ ದವಾ ಆಗಿದೆ. ಈಗಿನ ಯುವಕರು ಇದರಿಂದ ದೂರ ಇಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ತಾಲೂಕಿನ ಬೋದೂರು ತಾಂಡದಲ್ಲಿ ಬಂಜಾರ ಕುಲಗುರು, ಶ್ರೀ ಸೇವಾಲಾಲ ಮಹಾರಾಜರ 282ನೇ ಜಯಂತ್ಯುತ್ಸವ, ತುಲಾಭಾರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಂಡಗಳಲ್ಲಿ ಮದ್ಯ ಸಾಮಾನ್ಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸುಧಾರಣೆ ಕಂಡು ಕಡಿಮೆಯಾಗುತ್ತಿದೆ. ಮದ್ಯ ಸಂಪೂರ್ಣ ನಿಷೇಧ ಆಗಬೇಕಿದೆ ಎಂದರು.

ಶಾಸಕ ಅಮರೇಗೌಡ ಪಾಟೀಲ ಸಲಹೆ

ಸೇವಾಲಾಲ ಜನ್ಮ ದಿನ ಪ್ರಯುಕ್ತ ಮಾಲಾದಾರಿಗಳು ಏಕೋಪಾಸನೆಯಿಂದ ಧಾರ್ಮಿಕ ಸಂಸ್ಕಾರ ತಾಂಡಗಳಲ್ಲಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಸಂಸ್ಕಾರದಿಂದ ಮಕ್ಕಳು ಸಹಾ ಸಂಸ್ಕಾರವಂತರಾಗುತ್ತಾರೆ, ತಂದೆ ಕುಡಿತದ ದಾಸನಾದರೆ ಮಕ್ಕಳು ಅದೇ ದಾರಿ ಹಿಡಿಯಲಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಮಹ್ಮದ್ ಪೈಗಂಬರ್, ಯೇಸು ಕ್ರಿಸ್ತ, ಸೇವಾಲಾಲ್ ಹೀಗೆ ದೇವರು ಒಬ್ಬ ನಾಮ ಹಲವು ಇದೆ. ಅವರು ದೇವರ ರೂಪದಲ್ಲಿ ಬಂದಿರುವವರು, ಅವರು ಮನುಷ್ಯರಾಗಿ ಹುಟ್ಟಿದವರಾಗಿದ್ದು ದೇವರು ಒಮ್ಮಿದೊಮ್ಮೆಲೇ ಉದ್ಭವಿಸಿಲ್ಲ. ಉದ್ವವ ವ್ಯಕ್ತಿಗಳಾಗಿರುವ ದೇವರು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ನಮ್ಮ ನಿಮ್ಮಂತೆ ಮನುಷ್ಯನಾಗಿ ಹುಟ್ಟಿದವರು. ಆದರೆ ಭಾವನೆ, ನೀತಿ, ಮನಸ್ಸು, ರೀತಿ, ನಡೆ, ನುಡಿಯಿಂದ ದೇವರಂತಹ ವ್ಯಕ್ತಿತ್ವವುಳ್ಳವರಾಗಿದ್ದಾರೆ ಎಂದರು.

ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ವೇದಿಕೆಯಲ್ಲಿ ಬಂಜಾ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜ್, ಚಿಕ್ಕಕೊಡಗಲಿಯ ಬಂಜಾರ ಪೀಠದ ಶಂಕರ ಮಹಾರಾಜ್, ಹೇಮಗಿರಿ ಗೋಸಾವಿ ಸಾನಿಧ್ಯವಹಿಸಿದ್ದರು. ಆಲ್ ಇಂಡಿಯಾ ಭಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ಯಂಕಪ್ಪ ಚೌವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ABOUT THE AUTHOR

...view details