ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು - ಗಂಗಾವತಿ ತಾಲೂಕಿನ ಮುಷ್ಟೂರಿನಲ್ಲಿ ಯುವಕ ಸಾವು

ಬಹಿರ್ದೆಸೆಗೆ ತೆರಳಿದ್ದ ಯುವಕ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಮುಷ್ಟೂರು ಬಳಿ ನಡೆದಿದೆ.

ಗೋವಿಂದ ನಾಯಕ,  ಮೃತ ಯುವಕ

By

Published : Oct 20, 2019, 9:03 AM IST

ಕೊಪ್ಪಳ: ಬಹಿರ್ದೆಸೆಗೆ ತೆರಳಿದ್ದ ಯುವಕ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಮುಷ್ಟೂರು ಬಳಿ ನಡೆದಿದೆ.

ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು

ವಡ್ಡರಹಟ್ಟಿ ಕ್ಯಾಂಪ್ ನಿವಾಸಿ ಗೋವಿಂದ ನಾಯಕ (21) ಮೃತ ಯುವಕ ಎನ್ನಲಾಗಿದೆ. ಕ್ರಿಮಿನಾಶಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಂಪನಿ ಉತ್ಪನ್ನಗಳ ಪ್ರಚಾರಕ್ಕೆ ಅಂತಾ ಮುಷ್ಟೂರು ಭಾಗಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ಯುವಕ ಬಹಿರ್ದೆಸೆಗೆ ತೆರಳಿದ್ದಾಗ ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details