ಕೊಪ್ಪಳ: ಸಿಡಿಲಿಗೆ ಯವಕನೋರ್ವ ಬಲಿಯಾಗಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ನಡೆದಿದೆ.
ಕೊಪ್ಪಳ: ಸಿಡಿಲಿಗೆ ಯುವಕ ಬಲಿ, ಮಹಿಳೆ ಸ್ಥಿತಿ ಗಂಭೀರ - ಕೊಪ್ಪಳ ತಾಲೂಕಿನ ಕಾಟ್ರಳ್ಳಿ
ಹೊಲದ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಸಿಡಿಲು ಬಡಿದು ಯವಕ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ನಡೆದಿದೆ.

lightning strike
ಕಾಟ್ರಳ್ಳಿಯ ಕೋಟ್ರೇಶ (23) ಸಾವಿಗೀಡಾಗಿದ್ದು, ಚಿಕ್ಕಸಿಂದೋಗಿಯ ಹನುಮಂತವ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಕಾಟ್ರಳ್ಳಿ ಬಳಿ ಹೊಲದ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಸಿಡಿಲು ಬಡಿದು ಅವಘಡ ಸಂಭವಿಸಿದೆ. ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಯಾದಗಿರಿ: ಸಿಡಿಲು ಬಡಿದು ತಾಯಿ ಮಕ್ಕಳಿಬ್ಬರು ಸೇರಿ ನಾಲ್ವರು ಸಾವು