ಕರ್ನಾಟಕ

karnataka

ETV Bharat / state

ರೈಲ್ವೆ ಟ್ರ್ಯಾಕ್ ಮೇಲೆ ಪಾದಯಾತ್ರೆ ಮಾಡಿ ಊರು ಸೇರಿದ ಯುವಕರು - ರೈಲ್ವೆ ಟ್ರ್ಯಾಕ್ ಮೇಲೆ ಪಾದಯಾತ್ರೆ

ದುಡಿಯಲು ಬೇರೆ ಊರಿಗೆ ಹೋಗಿದ್ದ ಯುವಕರ ತಂಡವೊಂದು ಸಕಾಲಕ್ಕೆ ವಾಹನ ಸೌಲಭ್ಯ ಸಿಗದೇ ರೈಲ್ವೆ ಟ್ರ್ಯಾಕ್ ಮೇಲೆ ಪಾದಯಾತ್ರೆ ಕೈಗೊಂಡು ಊರು ತಲುಪಿದ ಘಟನೆ ಬೆಳಕಿಗೆ ಬಂದಿದೆ.

track
track

By

Published : May 10, 2021, 6:18 PM IST

Updated : May 10, 2021, 7:32 PM IST

ಗಂಗಾವತಿ:ಕುಟುಂಬ ನಿರ್ವಹಣೆಯ ನೊಗ ಹೊತ್ತ ಯುವಕರ ತಂಡವೊಂದು ಲಾಕ್​ಡೌನ್​ ಹಿನ್ನೆಲೆ ಸಕಾಲಕ್ಕೆ ವಾಹನ ಸೌಲಭ್ಯ ಸಿಗದೇ ರೈಲ್ವೆ ಟ್ರ್ಯಾಕ್ ಮೇಲೆ ಪಾದಯಾತ್ರೆ ಕೈಗೊಂಡು ಊರು ತಲುಪಿದ್ದಾರೆ.

ರೈಲ್ವೆ ಟ್ರ್ಯಾಕ್ ಮೇಲೆ ಪಾದಯಾತ್ರೆ ಮಾಡಿ ಊರು ಸೇರಿದ ಯುವಕರು

ತಾಲೂಕಿನ ಬಸವಪಟ್ಟಣ ಗ್ರಾಮದ ಯುವಕರು ದುಡಿಯಲು ಪಕ್ಕದ ಬಳ್ಳಾರಿ ಜಿಲ್ಲೆಗೆ ತೆರಳಿದ್ದರು. ಸೋಮವಾರದಿಂದ ಕಠಿಣ ಲಾಕ್​​ಡೌನ್ ಶುರುವಾಗಲಿದೆ ಎಂದು ಅರಿತು ಊರಿಗೆ ಬರಲು ತಯಾರಿ ನಡೆಸಿದರು. ಆದರೆ, ಸಕಾಲಕ್ಕೆ ವಾಹನಗಳು ಸಿಗದೇ ಪರದಾಡಿದರು. ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಪೊಲೀಸರ ಕಾಟ ಎಂದರಿತ 40 ಜನ ಯುವಕರನ್ನೊಳಗೊಂಡ ತಂಡ ಕಂಪ್ಲಿಯಿಂದ 25 ಕಿಮೀ ದೂರದ ತಮ್ಮೂರನ್ನು ರೈಲ್ವೆ ಹಳಿ ಮೂಲಕ ಪಾದಯಾತ್ರೆ ನಡೆಸಿ ತಲುಪಿದ್ದಾರೆ.

Last Updated : May 10, 2021, 7:32 PM IST

ABOUT THE AUTHOR

...view details