ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ - ಕೊಪ್ಪಳದಲ್ಲಿ ಬೆತ್ತಲೆಯ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೊಪ್ಪಳ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ಯುವಕನ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರ್ಯಾದಾ ಹತ್ಯೆ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ.

young man murder in Koppal district
ಬೆತ್ತಲೆಯ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

By

Published : Jun 23, 2021, 10:07 AM IST

Updated : Jun 23, 2021, 12:46 PM IST

ಕೊಪ್ಪಳ:ಸ್ನೇಹಿತರ ಜೊತೆಗೆ ಸಂತೋಷಕೂಟಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಘಟನೆ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದಿದೆ.

ನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಮೃತ ಯುವಕ ಗ್ರಾಮದ ದಾನೇಶ (ದಾನಪ್ಪ) ಕರಿಹನುಮಂತಪ್ಪ ಹರಿಜನ್ (24) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸ್ನೇಹಿತರ ಜೊತೆ ದಾನೇಶ್ ಪಾರ್ಟಿ ಮಾಡಲು ಹೋಗಿದ್ದಾನೆ. ಈ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಾನೇಶ ಗ್ರಾಮದ ಮತ್ತೊಂದು ಕೋಮಿನ ಯುವತಿಯೊಂದಿಗೆ ಪ್ರೇಮದಲ್ಲಿದ್ದನಂತೆ. ಕೆಲವು ದಿನಗಳ ಹಿಂದೆ ಆ ಯುವತಿಯ ಪಾಲಕರು ಹಾಗೂ ಕುಟುಂಬ ಸದಸ್ಯರು ಯುವಕನಿಗೆ ಎಚ್ಚರಿಕೆ ಕೊಟ್ಟು ಹಲ್ಲೆಗೆ ಯತ್ನಿಸಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಟಿ.ಶ್ರೀಧರ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಗೆ ಚುಡಾಯಿಸುತ್ತಿದ್ದ ಯುವಕನಿಗೆ ಪೆಟ್ರೋಲ್​ ಸುರಿದು ಸುಟ್ಟ ಪ್ರಕರಣ: ಮೂವರ ಬಂಧನ

Last Updated : Jun 23, 2021, 12:46 PM IST

ABOUT THE AUTHOR

...view details